Share on Social Networks


 Share

ವಿವರಗಳು

ಶ್ರೀ ಮಹಾಲಿಂಗೇಶ್ವರ :ಗಣಪತಿ:ಸುಬ್ರಮಣ್ಯ:ಶಾಸ್ತಾರ :ದೇವಿ:ನಾಗ :ಅಯ್ಯಪ್ಪ :ನವಗ್ರಹ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ,

ಪುತ್ತೂರು,

ದಕ್ಷಿಣ ಕನ್ನಡ

ಪುತ್ತೂರು:- 574201

ರೈಲು ಮಾರ್ಗ : ರೈಲು ನಿಲ್ದಾಣದಿಂದ ೧ ಕಿ.ಮೀ

ಬಸ್ ಮಾರ್ಗ : ಬಸ್ಸು ನಿಲ್ದಾಣದಿಂದ ೧ ಕಿ ಮೀ

ಕಾರು ಅಥವಾ ರಿಕ್ಷಾ ಮಾರ್ಗ : ಬಸ್ಸು ನಿಲ್ದಾಣದಿಂದ ೧ ಕಿಮಿ

ನಡೆಯುವ ಮಾರ್ಗ : ಪ್ರಧಾನ ಅಂಚೆ ಕಚೇರಿಯಿಂದ ೧೦೦ ಮೀ

ಬೆಳಿಗ್ಗೆ ಸಮಯ: 07:30

ಮಧ್ಯಾಹ್ನ ಸಮಯ: 01:00

ಸಂಜೆ ಸಮಯ: 07:30

ದೂರವಾಣಿ: 8251230511

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಬಹು ಪ್ರಾಚೀನ ಕಾಲದಲ್ಲಿ ವೇದ ವೇದಾಂತ ಪಾರಾಂಗತರಾದ ಶೈವ ಸಂಪ್ರದಾಯದ ವಿಪ್ರರೊಬ್ಬರು ಕಾಶಿ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣ ಪಥದಲ್ಲಿ ಸಂಚರಿಸುತ್ತಿದ್ದರು. ಶಿವಾರ್ಚನೆಯಲ್ಲೇ ಜೀವನವನ್ನು ಧನ್ಯವನ್ನಾಗಿ ಮಾಡಿಕೊಂಡಿದ್ದ ಈ ವಿಪ್ರೋತ್ತಮರು ಒಂದು ದಿನ ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದ ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ತನ್ನ ಮದ್ಯಾಹ್ನ ಭೋಜನಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವಾಗಿಟ್ಟುಕೊಂಡಿದ್ದ ಆ ವೃದ್ಧ ವಿಪ್ರರು ತನ್ನ ಸಂಪುಟದಿಂದ, ಸೂರ್ಯ ಪ್ರಭೆಯಿಂದ ಕಂಗೊಳಿಸುವ ಸುಂದರಾಕೃತಿಯ ಶಿವಲಿಂಗವೊಂದನ್ನು ತೆಗೆದು ಗೋವಿಂದಭಟ್ಟರ ಕೈಗಿತ್ತು ಇದನ್ನು ಕೈಯಲ್ಲಿಟ್ಟುಕೊಂಡೇ ಪೂಜಿಸಬೇಕೆಂದು ತಿಳಿಸಿ ತಾವು ಕುಮಾರಧಾರ ನದಿಗೆ ಸ್ನಾನಕ್ಕೆಂದು ಹೋದರು. ಎಷ್ಟು ಸಮಯ ಕಳೆದರೂ, ಅವರು ಹಿಂದಿರುಗದನ್ನು ನೋಡಿ ಅವರು ಆ ಶಿವಲಿಂಗವನ್ನು ತೆಗೆದುಕೊಂಡು ಸೂರ್ಯಾಸ್ತಮಾನಕ್ಕಿಂತ ಮೊದಲು ಪುತ್ತೂರನ್ನು ತಲುಪಿದರು. ಅಲ್ಲಿ ವಿಶ್ರಾಂತಿ ಪಡೆದರು. ಮರುದಿನ ಈ ದ್ವಿಜರು ತನ್ನ ಶೌಚಾದಿಗಳನ್ನು ಮುಗಿಸಿ ಶಿವನ ಸೋಮವಾರದ ವಿಶೇಷ ಪೂಜೆಗೆ ಬೇಕಾದ ಸಾಹಿತ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಬಂಗರ ಅರಮನೆಗೆ ಹೋದರು. ಶಿವಾರ್ಚನೆಯೇ ಉಸಿರಾಗಿರುವ ಆ ಬ್ರಾಹ್ಮಣೋತ್ತಮನು ಇಲ್ಲಿನ ಕೆರೆಯಲ್ಲಿ ಮಿಂದು ಮರೆತೋ, ತಿಳಿಯದೆಯೋ,ಶಿವಲಿಂಗವನ್ನು ಭೂಮಿಯ ಮೇಲಿಟ್ಟು ಪೂಜಿಸಿದನು. ಶಿವನಿಗೆ ಅರ್ಪಿಸಿದ ನೈವೇದ್ಯವನ್ನು ತಾನು ಸ್ವೀಕರಿಸಿ, ತನ್ನ ಪ್ರಯಾಣವನ್ನು ಮುಂದುವರಿಸುವ ಮೊದಲು ಶಿವಲಿಂಗವನ್ನು ಭೂಮಿಯಿಂದ ಮೇಲೆತ್ತಿ ತನ್ನ ಸಂಪುಟಕ್ಕೆ (ಪೆಟ್ಟಿಗೆಗೆ) ಹಾಕಿಕೊಳ್ಳಲು ಪ್ರಯತ್ನಿಸಿದನು. ಶಿವಲಿಂಗವು ಮೇಲೆ ಬರಲೇ ಇಲ್ಲ .ಇನ್ನಷ್ಟು ಶಕ್ತಿಯಿಂದ ಮೇಲೆತ್ತಲು ಪ್ರಯತ್ನಿಸಿದರೂ ಲಿಂಗವನ್ನು ಕದಲಿಸುವುದಕ್ಕಾಗಲಿಲ್ಲ . ಶಿವಲಿಂಗವು ಗಟ್ಟಿಯಾಗಿಯೇ ನೆಲವನ್ನು ಹಿಡಿದುಕೊಂಡಿತ್ತು ಲಿಂಗರೂಪಿ ಮಹಾದೇವನು ಪುತ್ತೂರಿನ ಪುಣ್ಯಭೂಮಿಯಲ್ಲೇ ನೆಲೆಸಲು ಸಂಕಲ್ಪ ಮಾಡಿದನು .

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ವಿಶ್ರಾಂತಿ ಗೃಹ
7
ನೆರಳಿನ ವ್ಯವಸ್ಥೆ
8
ಸರತಿ ಸಾಲಿನ ವ್ಯವಸ್ಥೆ
9
ಜಾತ್ರೆಯ ಮುಂಜಾಗ್ರತಾ ಕ್ರಮ
10
ದಾಸೋಹ ವ್ಯವಸ್ಥೆ
11
ಉದ್ಯಾನವನ/ತೋಟಗಾರಿಕೆ
12
ಸಾರ್ವಜನಿಕ ಮಾಹಿತಿ ಕೇಂದ್ರ
13
ಅನ್ನ ಛತ್ರ
14
ಸಮಾರಂಭದ ಹಾಲ್
15
ಮೇಲಿನ ಯಾವುದು ಅಲ್ಲ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರ ಪಂಚಮಿ
2
ಗಣೇಶ ಚತುರ್ಥಿ
3
ಲಕ್ಷದೀಪೋತ್ಸವ
4
ಮಹಾಶಿವರಾತ್ರಿ
5
ವಾರ್ಷಿಕ ಜಾತ್ರೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕಾರ್ತೀಕ ಪೂಜೆ 150.00
2
ಮಹಾ ಪೂಜೆ 200.00
3
ಹೂವಿನ ಪೂಜೆ 75.00
4
ದುರ್ಗಾ ಪೂಜೆ 100.00
5
ಗಣಪತಿ ಹೋಮ 250.00
6
ದೂರ್ವಾ ಹೋಮ 150.00
7
ಏಕಾದಶ ರುದ್ರಾಭಿಷೇಕ 1100.00
8
ಕಟ್ಟೆ ಪೂಜೆ 100.00
9
ಗ್ರಹ ಜಪ ೧೦೦ಕ್ಕೆ 10.00
10
ನವಗ್ರಹ ಪೂಜೆ 750.00
11
ಒಂದು ಗ್ರಹ ಪೂಜೆ 200.00
12
ನಾಗ ತಂಬಿಲ 200.00
13
ಧನು ಪೂಜೆ 150.00
14
ರಂಗಪೂಜೆ 1250.00
15
ದೈವ ತಂಬಿಲ 500.00
16
ವಸಂತ ಪೂಜೆ 100.00
17
ಅಶ್ಲೇಷ ಬಲಿ 1000.00
18
ಶ್ರೀ ಸತ್ಯನಾರಾಯಣ ಪೂಜೆ 500.00
19
ಅನ್ನಪ್ರಾಶನ 30.00
20
ಬಲಿವಾಡು ಸೇವೆ 75.00
21
೫೦ ಜನರ ಸಂತರ್ಪಣೆ 4000.00
22
ಸರ್ವ ಸೇವೆ 250.00
23
೩ ಕಾಯಿ ಗಣಹೋಮ 450.00
24
ಕಲಶ ಸ್ನಾನ 50.00
25
ಪ್ರಾರ್ಥನೆ 50.00
26
ಪಾಲಕಿ ಉತ್ಸವ 3000.00
27
ಅಕ್ಷರಾಭ್ಯಾಸ 100.00
28
ವಾಹನ ಪೂಜೆ(ದ್ವಿಚಕ್ರ ) 20.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ 01342200003335 ಮುಖ್ಯರಸ್ತೆ ಪುತ್ತೂರು ಮುಖ್ಯರಸ್ತೆ ಪುತ್ತೂರು SYNB0000134
  2
  ವಿಜಯ ಬ್ಯಾಂಕ್ 117701010005970 ಕೆ.ಪಿ.ಕಾಂಪ್ಲೆಕ್ಸ್ ಪುತ್ತೂರು ಪುತ್ತೂರು VIJB0001177
  3
  ಕರ್ನಾಟಕ ಬ್ಯಾಂಕ್ 6042500100057601 ಮುಖ್ಯರಸ್ತೆ ಪುತ್ತೂರು ಪುತ್ತೂರು KARB0000604

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ