Share on Social Networks


 Share

ವಿವರಗಳು

ಶ್ರೀ ಮಂಜುನಾಥ ದೇವರು :ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರು :ಶ್ರೀ ಮಹಾಗಣಪತಿ ದೇವರು:ಶ್ರೀ ಗೋಮುಖ ಗಣಪತಿ ದೇವರು :ಶ್ರೀ ಧರ್ಮಶಾಸ್ತಾರ ದೇವರು

ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ,

ಮಂಗಳೂರು,

ದಕ್ಷಿಣ ಕನ್ನಡ

ಬಲ್ಮಠ :- 575002

ರೈಲು ಮಾರ್ಗ : ಕಂಕನಾಡಿ ರೈಲ್ವೆ ಸ್ಟೇಷನ್ ಮಂಗಳೂರು ಸೆಂಟ್ರಲ್

ಬಸ್ ಮಾರ್ಗ : ಸ್ಟೇಟ್ ಬ್ಯಾಂಕ್ - ಮಲ್ಲಿಕಟ್ಟೆ

ಕಾರು ಅಥವಾ ರಿಕ್ಷಾ ಮಾರ್ಗ : ಕದ್ರಿ ದೇವಸ್ಥಾನ

ನಡೆಯುವ ಮಾರ್ಗ : ಆಕಾಶವಾಣಿ ಮಂಗಳೂರು ಇದರ ಎದುರು ರಸ್ತೆ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 08:00

ದೂರವಾಣಿ: 8242214176

ಇಮೇಲ್: shreekadritemple@gmail.com

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ದೇಗುಲದ ಸ್ಥಳ ಪುರಾಣ ಪ್ರಾಚೀನ ಹಾಗೂ ವಿಶಿಷ್ಟವಾದ ಭಾರದ್ವಾಜಸಂಹಿತೆ ಎಂಬ ಗ್ರಂಥದಲ್ಲಿ ಇದರ ಆದಿಚರಿತ್ರೆಯು ಉಲ್ಲೇಖಿಸಲ್ಪಟ್ಟಿದೆ. ಈಗ ದೇವಸ್ಥಾನವಿರುವ ಸ್ಥಳಕ್ಕೆ ಹಿಂದಿನ ಕಾಲದಲ್ಲಿ ಸುವರ್ಣ ಕದಳೀವನ ಎಂಬ ಹೆಸರಿತ್ತು. ಶ್ರೀ ಪರಶುರಾಮನು ಬ್ರಾಹ್ಮಣರಿಗೆ ದಾನವಾಗಿ ಎಲ್ಲವನ್ನೂ ಅರ್ಪಿಸಿದ ನಂತರ ಪರಮೇಶ್ವರನನ್ನು ಒಲಿಸಿಕೊಳ್ಳುವುದಕ್ಕಾಗಿ ಘನಘೋರ ತಪಶ್ಚರ್ಯೆಯನ್ನು ಕೈ ಗೊಂಡನು. ಪರಮೇಶ್ವರನು ಅವನ ಅನನ್ಯ ಭಕ್ತಿಗೆ ಮೆಚ್ಚಿ "ಹೇ ಪರಶುರಾಮಾ, ನಾನು ಸುವರ್ಣ ಕದಳೀ ವನದಲ್ಲಿರುವ ರಸಕೂಪದಲ್ಲಿ ಸದಾ ನೆಲೆಸಿರುವೆನು. ಅಲ್ಲಿಗೆ ಹೋಗಿ ನನ್ನನ್ನು ಆರಾಧಿಸು" ಎಂದನು. ಆದರೆ ಆ ಕಾಲದಲ್ಲಿ ಸುವರ್ಣ ಕದಳೀವನವು ಸಮುದ್ರದ ಅಡಿಯಲ್ಲಿದ್ದ ಕಾರಣ ಪರಶುರಾಮಾನು ಸಮುದ್ರದಿಂದ ಈ ಸ್ಥಳವನ್ನು ಮರಳಿ ಪಡೆದು ರಸಕೂಪವನ್ನು ಬಹು ದೀರ್ಘಕಾಲದವರೆಗೆ ಆರಾಧಿಸುತ್ತಿದ್ದನು .ಕಟ್ಟಕಡೆಗೆ ಮಹಾ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ದಿವ್ಯ ಶಕ್ತಿ ಸಮ್ಮಿಲನದಿಂದ ಶ್ರೀ ಮಂಜುನಾಥ ರೂಪದಲ್ಲಿ ವ್ಯಕ್ತರಾಗಿ ಪರಶುರಾಮನ ಮನೋಭಿಲಾಷೆಯನ್ನು ನೆರವೇರಿಸಿದರು. ಸಪ್ತಕೋಟಿ ಮಹಾ ಮಂತ್ರಗಳೆಂಬ ಏಳು ಕೋಟಿ ಪವಿತ್ರ ಕೀರ್ತನೆಗಳು ಬಹು ಪ್ರಸಿದ್ಧವಾಯಿತು. ಅದೇ ಸಮಯದಲ್ಲಿ ಪವಿತ್ರ ಭಾಗೀರಥಿ ತೀರ್ಥವು ಒಂದು ರಂಧ್ರದಲ್ಲಿ ಹೊರಸೂಸಿ ಈಶಾನ್ಯ ದಿಕ್ಕಿನಲ್ಲಿ ತಲೆದೋರಿತು. ಶಿವನ ಅವತಾರವಾದ ಮತ್ಸೇಇಂದ್ರನು ನಾಥನು ಪಾರ್ವತಿಯ ಅವತಾರವಾದ ಮಂಗಲಾ ಎಂಬ ರಾಣಿಯನ್ನೂ, ತನ್ನ ಪ್ರೀತಿಯ ಶಿಷ್ಯ ಗೋರಕ್ಷನಾಥನನ್ನೂ ಕೂಡಿಕೊಂಡು ಸತಿರಾಜ್ಯದಿಂದ ಮರಳಿ ಬರುತ್ತಿರುವಾಗ ಸುವರ್ಣ ಕದಳೀವನಕ್ಕೆ ಬಂದನೆಂದೂ , ಅಲ್ಲಿರುವ ಇತರ ಶಿಷ್ಯರು ಅವರನ್ನು ಸ್ವಾಗತಿಸಿದರೆಂದು ಮುಂದೆ ಹೇಳಲ್ಪಟ್ಟಿದೆ. ಆಗ ಮತ್ಸೇಇಂದ್ರನಾಥನು ಸುವರ್ಣ ಕದಳೀವನದಲ್ಲಿ ಒಂದು ಲಿಂಗವನ್ನು ಪ್ರತಿಷ್ಠಿಸಬೇಕೆಂದು ನಿಶ್ಚಯಿಸಿ , ತನ್ನ ಶಿಷ್ಯರೊಡನೆ ಕಾಶಿಗೆ ಹೋಗಿ ಶಿವಲಿಂಗವನ್ನು ತರಹೇಳಿದರು. ಆದರೆ ಕ್ಲಪ್ತಕಾಲದಲ್ಲಿ ಗೋರಕ್ಷನಾಥನು ಶಿವಲಿಂಗವನ್ನು ತಾರದೆ ಹೋದುದರಿಂದ ಮತ್ಸೇಇಂದ್ರನು ಶಿವನನ್ನು ಕುರಿತು ಉಗ್ರ ತಪಸ್ಸನ್ನು ಮಾಡಲು ಅವನ ಪ್ರಾಥನೆಯ ಫಲವಾಗಿಯೋ ಎಂಬಂತೆ ಅಲ್ಲಿ ನೆರೆದಿದ್ದ ಎಲ್ಲಾ ಯತಿಗಳಿಗೆ ಸಂತೋಷವೂ ಆಶ್ಚರ್ಯವೂ ಉಂಟಾಗುವಂತೆ ಒಂದು ಸ್ವಯಂಭೂಲಿಂಗವು ಉದ್ಭವಿಸಿತು. ಆದರೆ ಉದ್ಭವವಾದ ತರುವಾಯ ಗೋರಕ್ಷನಾಥನು ಕಾಶಿಯಿಂದ ಒಂದು ಶಿವಲಿಂಗವನ್ನು ತರಲು ಅದರ ಅವಶ್ಯಕತೆ ಆಗ ಇಲ್ಲದೆ ಹೋದ ಕಾರಣ ಅದನ್ನು ಸಮೀಪದ ಒಂದು ತೀರ್ಥದಲ್ಲಿ ಕಾಯ್ದಿಡಲಾಯಿತು. ಬಹು ಕಾಲದ ನಂತರ ಆ ಶಿವಲಿಂಗವನ್ನು ಅಣ್ಣಪ್ಪ ದೈವವು ಧರ್ಮಸ್ಥಳಕ್ಕೆ ಕೊಂಡೊಯ್ಯಲು ಅಲ್ಲಿ ಅದು ಉಡುಪಿಯ ಪ್ರಖ್ಯಾತ ವಾದಿರಾಜ ಸ್ವಾಮಿಯವರಿಂದ ಪ್ರತಿಷ್ಠಿಸಲ್ಪಟ್ಟಿತ್ತು. ಆದುದರಿಂದ ಧರ್ಮಸ್ಥಳಕ್ಕೆ ಕದ್ರಿ ಕ್ಷೇತ್ರವು ಆದಿ ದೇವಸ್ಥಾನವಾಯಿತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ
9
ಮೇಲಿನ ಯಾವುದು ಅಲ್ಲ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ನೆರಳಿನ ವ್ಯವಸ್ಥೆ
8
ಸರತಿ ಸಾಲಿನ ವ್ಯವಸ್ಥೆ
9
ಜಾತ್ರೆಯ ಮುಂಜಾಗ್ರತಾ ಕ್ರಮ
10
ದಾಸೋಹ ವ್ಯವಸ್ಥೆ
11
ಉದ್ಯಾನವನ/ತೋಟಗಾರಿಕೆ
12
ಸಾರ್ವಜನಿಕ ಮಾಹಿತಿ ಕೇಂದ್ರ
13
ಅನ್ನ ಛತ್ರ
14
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವಾರ್ಷಿಕ ಜಾತ್ರೆ
2
ಶಿವರಾತ್ರಿ
3
ನಾಗರ ಪಂಚಮಿ
4
ನವರಾತ್ರಿ
5
ಲಕ್ಷ ದೀಪೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 50.00
2
ಕರ್ಪೂರ ಆರತಿ 5.00
3
ಅಷ್ಟೋತ್ತರ ಅರ್ಚನೆ 40.00
4
ಶಿವ ಪೂಜೆ 80.00
5
ಕಾರ್ತಿಕ ಪೂಜೆ 50.00
6
ಪಂಚಾಮೃತ 70.00
7
ಬಿಲ್ವಾರ್ಚನೆ 20.00
8
ಶತರುದ್ರಾಭಿಷೇಕ (ಸಂತರ್ಪಣೆ ಸೇರಿ) 11,000.00
9
ಹಾಲು ಪಾಯಸ 65.00
10
ಏಕಾದಶ ರುದ್ರ 200.00
11
ಹೂವಿನ ಪೂಜೆ 120.00
12
ರಂಗ ಪೂಜೆ 1700.00
13
ಸಹಸ್ರ ನಾಮಾರ್ಚನೆ 50.00
14
ಮಹಾಪೂಜೆ 750.00
15
ಕಲಶ ಸ್ನಾನ 20.00
16
ನಾಗ ಪೂಜೆ 60.00
17
ವಸಂತ ಪೂಜೆ 130.00
18
ಧನು ಪೂಜೆ 100.00
19
ತೀರ್ಥ ಬಾಟ್ಲಿ 10.00
20
ಅಶ್ವಥ ಪೂಜೆ 50.00
21
ಅಪರಕ್ರಿಯೆ (ಕಾಣಿಕೆ) 100.00
22
ತುಲಾಭಾರ (ಸೊತ್ತು ವಿನಹ) 400.00
23
ಹಣ್ಣು ಕಾಯಿ 20.00
24
ಬೆಳ್ಳಿ ರಥೋತ್ಸವ 6000.00
25
ನವಗ್ರಹ ಪೂಜೆ 100.00
26
ನವಗ್ರಹ ಜಪ ಪ್ರತಿಯೊಂದಕ್ಕೆ 50.00
27
ಮೃತ್ಯುಂಜಯ ಹೋಮ 2400.00
28
ಕುಜರಾಹು ಶಾಂತಿ ಹೋಮ 2700.00
29
ರಾಹುಬ್ರಹಸ್ಪತಿ ಹೋಮ 2700.00
30
ಶುಕ್ರಾದಿತ್ಯ ಹೋಮ 2700.00
31
ನವಗ್ರಹ ಶಾಂತಿ ಹೋಮ 2300.00
32
ದೂರ್ವಾಯುಷ್ಯ ಹೋಮ 1700.00
33
ಪಂಚಮಾರಿಷ್ಟ ಶಾಂತಿ ಹೋಮ 2300.00
34
ಮೃತ್ಯು ಪರಿಹಾರಕ ರುದ್ರ ಹೋಮ 1700.00
35
ತಿಲ ಹೋಮ / ಪಿಂಡ 750.00
36
ಗುರು ಪೂಜೆ 100.00
37
ಸಂಕಷ್ಟಿ ಉದ್ಯಾಪನೆ 2500.00
38
ಸೋಮವಾರ ವೃತ ಉದ್ಯಾಪನೆ 2500.00
39
ಶನಿಪೂಜೆ ಉದ್ಯಾಪನೆ 2500.00
40
ಸತ್ಯನಾರಾಯಣ ಪೂಜೆ ಉದ್ಯಾಪನೆ 2500.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಇಂಡಿಯನ್ ಓವರ್ ಸೀಸ್ ಬ್ಯಾಂಕ್ 177001000000001 ಕದ್ರಿ, ಮಂಗಳೂರು ಕದ್ರಿ IOBA0001770

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ