ವಿವರಗಳು

ಶ್ರೀ ಅಮೃತೇಶ್ವರ ದೇವಸ್ಥಾನ :ಗಣಪತಿ ದೇವರು :ನಾಗ ದೇವರು

ಶ್ರೀ ಅಮೃತೇಶ್ವರ ದೇವಸ್ಥಾನ ,ತಿರುವೈಲು ಗ್ರಾಮ ,ವಾಮಂಜೂರು ಅಂಚೆ ,ಮಂಗಳೂರು ತಾಲೂಕು ,ದಕ್ಷಿಣ ಕನ್ನಡ -575028,

ಮಂಗಳೂರು,

ದಕ್ಷಿಣ ಕನ್ನಡ

ವಾಮಂಜೂರು :- 575028

ರೈಲು ಮಾರ್ಗ : ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್

ಬಸ್ ಮಾರ್ಗ : ಮಂಗಳೂರು ಮೂಡುಬಿದ್ರಿ ಹೆದ್ದಾರಿಯಲ್ಲಿ ಬರುತ್ತದೆ

ಕಾರು ಅಥವಾ ರಿಕ್ಷಾ ಮಾರ್ಗ : ವಾಮಂಜೂರು ಮೂಡಬಿದ್ರಿಯ ಹೆದ್ದಾರಿಯಲ್ಲಿ ವಾಮಂಜೂರಿನಿಂದ ಬರಬೇಕು

ನಡೆಯುವ ಮಾರ್ಗ : ಮಂಗಳೂರು ಮೂಡುಬಿದ್ರಿಯ ಹೆದ್ದಾರಿಯಲ್ಲಿ ಕೆತ್ತಿಕಲ್ಲಿನಿಂದ ೧.೫ಕೀಲೋ .ಮೀಟರ್

ಬೆಳಿಗ್ಗೆ ಸಮಯ: 06:30

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 19:30

ದೂರವಾಣಿ: 8242262169

ಇಮೇಲ್: info@amrutheshwaratemplr.in

ವೆಬ್ ಸೈಟ್: www.amrutheshwaratemple.in

ಇತಿಹಾಸ

ಈ ದೇವಸ್ಥಾನದ ಉತ್ತರ ಪಾರ್ಶ್ವದಲ್ಲಿ ಮೃಕಂಡು ತೀರ್ಥ ಅಥವಾ ಫಲ್ಗುಣಿ ಹೊಳೆಯು ಹರಿಯುತ್ತಿದೆ. ಧಾರ್ಮಿಕನಾದ ರಾಮಂತಾಯ ಅರಸರಿಗೆ ಮಕ್ಕಳ್ಳಿಲ್ಲದ್ದರಿಂದ ಈ ಸಪ್ತ ಋಷಿಗಳ ಮೂಲಕ ದೇವಸ್ಥಾನದ ಎದುರು ಪುತ್ರಕಾಮೇಷ್ಟಿ ಎಂಬ ಯಾಗವನ್ನು ಮಾಡಿಸಿದ.ಇದರಿಂದ ಪುತ್ರರನ್ನು ಪಡೆದು ಸುಖಿಯಾಗಿದ್ದನು. ಯಾಗದ ಕಾಲದಲ್ಲಿ ವಿಪ್ರಕುಲಕ್ಕೆ ಅನ್ನದಾನ ಮಾಡಲು, ಈಗ ಸಾಲೆಮನೆ ಇರುವಲ್ಲಿ ಅನ್ನಸಾಲೆ ಕಟ್ಟಿಸಿದನು. ಯಾಗಕ್ಕಾಗಿ ಈ ತುಳುನಾಡಿನಲ್ಲಿ ಹಾಲು ತರುತ್ತಿದ್ದ ವಾಡಿಕೆ ಪೆರ್ಮಂಕಿ ಎಂತಲೂ ಮೊಸರು ತರುತ್ತಿದ್ದ ವಾಡಿಕೆ ಬೆಂಜನಪದವು ಎಂತಲೂ ಫಲಪುಷ್ಪ ತರುತ್ತಿದ್ದ ವಾಡಿಕೆ ಪಾಡು ಎಂತಲೂ ಬೊಂಡ ತರುತ್ತಿದ್ದ ವಾಡಿಕೆ ಬೊಂಡನಲ ಎಂತಲೂ ನಾಮಕರಣ ಮಾಡಿದ್ದನು.ಅದೇ ಹೆಸರು ಈಗಲೂ ರೂಢಿಯಲ್ಲಿದೆ. ಅನ್ನಸಾಲೆಯಿದ್ದ ಮನೆಯಲ್ಲಿ ಈಗ ಬಂಟರು ವಾಸವಾಗಿದ್ದಾರೆ . ಈಗಲೂ ಆ ಮನೆಗೆ ಸಾಲೆಮನೆ ಎಂದು ಕರೆಯುತ್ತಾರೆ.ಯಾಗದ ದೆಸೆಯಿಂದ ಅರಸನಿಗೆ ಪುತ್ರ ಸಂತಾನವಾಗಲು ಅಸೂಯೆಪಟ್ಟ ಅಳಿಯಂದಿರು ಮಾವನಿಗೆ ಅರ್ಚಕರ ಮೂಲಕ ವಿಷವನ್ನು ತೀರ್ಥದಲ್ಲಿ ಕಲಸಿಕೊಡುವಂತೇ ಅರ್ಚಕರಿಗೆ ಲಂಚ ಕೊಟ್ಟು ಒಪ್ಪಿಸಿದರು. ಒಂದು ದಿನ ರಾಜನು ತೀರ್ಥಪ್ರಸಾದ ತೆಗೆದು ಕೊಳ್ಳಲು ಹೋದಾಗ ತೀರ್ಥ ಕೊಡುವ ಅರ್ಚಕನ ಕೈಕಾಲು ನಡುಗಲು, ಕಾರಣವೇನೆಂದು ವಿಚಾರಿಸಲು, ರಾಜ ದ್ರೋಹಿಯಾದ ಬ್ರಾಹ್ಮಣನ ಮೂಲಕ ಈ ವಂಚನೆಯು ರಾಜನ ತಿಳುವಳಿಕೆಗೆ ಬಂದು ನಾನು ಕ್ಷತ್ರಿಯನಾದ್ದರಿಂದ ನೀಡಿದ ಕೈ ಹಿಂದಕ್ಕೆಳೆಯಲಾರೆ. ಆದರೆ ಈ ತೀರ್ಥದಲ್ಲಿರುವ ವಿಷ ಅಮೃತವಾದರೆ ಇಧೇ ಪ್ರದೇಶದಲ್ಲಿ ಒಂದು ಶಿವದೇವಸ್ಥಾನ ಸ್ಥಾಪಿಸಿ, ಆ ದೇವರಿಗೆ ಅಮೃತೇಶ್ವರ ಎಂಬ ನಾಮಕರಣ ಮಾಡುವೆನೆಂದು ಹರಕೆ ಹೇಳಿ ಕುಡಿದೇ ಬಿಟ್ಟನು. ಅದು ಅಮೃತವಾಯಿತು. ಮರುದಿನವೇ ಆದಿದ್ರಾವಿಡ ತಿರುವನ ಸ್ವಾಧೀನವಿದ್ದ ಹಳ್ಳಿಯ ಮಧ್ಯಪ್ರದೇಶದಲ್ಲಿ ಒಂದು ಶಿವಲಿಂಗ ಸ್ಥಾಪನೆ ಮಾಡಿಸಿ ಗುಂಡ ಕಟ್ಟಿಸಿ ಪೂಜಾ ವಿನಿಯೋಗಗಳ ಬಗ್ಗೆ ೩ ಕೊರ್ಜಿ ಅಕ್ಕಿಯ ಸ್ಥಳ, ಉಂಬಳಿ ಬಿಟ್ಟು ತಿರುವೈಲು, ಬೊಂಡಂತಿಲ, ಪೆರ್ಮಂಕಿ ಪಾಡು ಉಳಾಯಿಬೆಟ್ಟು ಯಾ ಮೂಡು ಜಪ್ಪು ಎಂಬ ೫ ಗೊತ್ತುವಳಿಯಾರನ್ನು ನೇಮಿಸಿ, ಅವರ ಮೂಲಕ ಈ ಅಮೃತೇಶ್ವರ ದೇವಸ್ಥಾನದ ಹವ್ಯಕವ್ಯಾದಿ ೯ ದಿನಗಳ ಜಾತ್ರೆ ಜರಗುವಂತೆ ಏರ್ಪಡಿಸಿ, ತನ್ನ ಅಳಿಯಂದಿರಿಬ್ಬರನ್ನು ಮರಣ ದಂಡನೆಗೆ ವಿಧಿಸಿ ಅವರ ಜೀವನಕ್ಕೆ ಬಿಟ್ಟಿದ್ದ ೪೨ ಕೊರ್ಜಿ ಅಕ್ಕಿಯ ಸ್ಥಳವನ್ನು ತನ್ನ ಮಂತ್ರಿಯಾದ ಜನಾರ್ಧನ್ ರಾವ್ ಎಂಬ ವಿಪ್ರೋತ್ತಮನಿಗೆ ಬಿಟ್ಟುಕೊಟ್ಟು ತೆಕ್ಕಿಬೆಟ್ಟು ಎಂಬ ಸ್ಥಳದಲ್ಲಿ ಒಂದು ಮನೆ ಕಟ್ಟಿಸಿ ಆತನು ಅಲ್ಲಿ ಇದ್ದು ಅಮೃತೇಶ್ವರನ ಪೂಜಾದಿಗಳನ್ನು ಮಾಡಿಸಬೇಕೆಂದು ಮಂತ್ರಿಯೇ ಆದಿಯಾಗಿ ಗುತ್ತಿನವರೆಲ್ಲರೂ ಆ ದೇವಸ್ಥಾನದ ಮೊಕ್ತೇಸರರೆಂತಲೂ ನೇಮಕ ಮಾಡಿ ಮಂತ್ರಿ ಕುಲದೇವನಾಗಿ ಒಂದು ವಿಷ್ಣು ಪ್ರತಿಮೆಯನ್ನು ಉಪ್ಪಿನಂಗಡಿಯಿಂದ ತರಿಸಿ ಮಂತ್ರಿ ಅರಮನೆಯ ಎದುರು ತೆಕ್ಕಿನ ಮರಗಳಿರುವ ಕಾಡಿನ ಮದ್ಯದಲ್ಲಿ ಸ್ಥಾಪಿಸಿ ಗುಡಿ ಕಟ್ಟಿಸಿ ಅದಕ್ಕೆ ವಿಷ್ಣು ಮೂರ್ತಿ ಎಂಬ ಹೆಸರಿಟ್ಟು ಪೂಜಿಸುವಂತೆ ಮಂತ್ರಿಗೆ ಆಜ್ಞಾಪಿಸಿದನು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಕಚೇರಿ ಸಿಬ್ಬಂಧಿ
6
ಅರ್ಚಕ
7
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ವಿಶ್ರಾಂತಿ ಗೃಹ
7
ನೆರಳಿನ ವ್ಯವಸ್ಥೆ
8
ಸರತಿ ಸಾಲಿನ ವ್ಯವಸ್ಥೆ
9
ಜಾತ್ರೆಯ ಮುಂಜಾಗ್ರತಾ ಕ್ರಮ
10
ದಾಸೋಹ ವ್ಯವಸ್ಥೆ
11
ಅನ್ನ ಛತ್ರ
12
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರಪಂಚಮಿ
2
ದೀಪಾವಳಿ
3
ವಾರ್ಷಿಕ ಉತ್ಸವ
4
ಗಣೇಶ ಚತುರ್ಥಿ
5
ನವರಾತ್ರಿ
6
ಮಹಾಶಿವರಾತ್ರಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಸಣ್ಣ ರುದ್ರಾಭಿಷೇಕ 10
2
ಕಾರ್ತಿ ಪೂಜೆ 10
3
ತೀರ್ಥ ಬಾಟ್ಲಿ 10
4
ಪಂಚಕಚ್ಚಾಯ 10
5
ನಂದಾ ದೀಪ 20
6
ಅಷ್ಟೋತ್ತರ ಪೂಜೆ 20
7
ಪಂಚಾಮೃತ ಅಭಿಷೇಕ 30
8
ಸೀಯಾಳ ಅಭಿಷೇಕ 30
9
ಹಣ್ಣುಕಾಯಿ 30
10
ಸಹಸ್ರನಾಮ ಪೂಜೆ 50
11
ಅಪ್ಪದ ಪೂಜೆ 50
12
ರುದ್ರಾಭಿಷೇಕ 50
13
ಪಂಚಾಮೃತ ಸಹಿತ ರುದ್ರಾಭಿಷೇಕ 60
14
ಹೂವಿನ ಪೂಜೆ 100
15
ನೈವೇದ್ಯ ಸಹಿತ ರುದ್ರಾಭಿಷೇಕ 200
16
ದೀಪಾಲಂಕಾರ ಪೂಜೆ 1,001
17
ಏಕಾದಶ ರುದ್ರಾಭಿಷೇಕ 750
18
ಶತ ರುದ್ರಾಭಿಷೇಕ 750
19
ರಂಗ ಪೂಜೆ 750

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ವಿಜಯ ಬ್ಯಾಂಕ್ 122301011000820 ವಾಮಂಜೂರು ಅಂಚೆ ,ಮಂಗಳೂರು ವಾಮಂಜೂರು VIJB0001223

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ