Share on Social Networks


 Share

ವಿವರಗಳು

ಶ್ರೀ ಸಹಸ್ತ್ರಲಿಂಗೇಶ್ವರ ಮಹಾಕಾಳಿ :ಶ್ರೀ ಕಲ್ಕುಡ

ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ,ಉಪ್ಪಿನಂಗಡಿ ,

ಪುತ್ತೂರು,

ದಕ್ಷಿಣ ಕನ್ನಡ

ಉಪ್ಪಿನಂಗಡಿ :- 574241

ರೈಲು ಮಾರ್ಗ : ಪುತ್ತೂರು

ಬಸ್ ಮಾರ್ಗ : ಉಪ್ಪಿನಂಗಡಿ -ಪುತ್ತೂರು

ಕಾರು ಅಥವಾ ರಿಕ್ಷಾ ಮಾರ್ಗ

ನಡೆಯುವ ಮಾರ್ಗ

ಬೆಳಿಗ್ಗೆ ಸಮಯ: 07:30

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 19:00

ದೂರವಾಣಿ: 251015

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧನಂತರ ಪಾಂಡವರಲ್ಲಿ ಅಸಂಖ್ಯಾತ ಜೀವ ಬಲಿಯಾದ ಬಗ್ಗೆ ಪಾಪ ಪ್ರಜ್ಞೆ ಕಾಡಹತ್ತುತ್ತದೆ. ಶ್ರೀ ಕೃಷ್ಣನಲ್ಲಿ ತಮ್ಮ ಅಳಲನ್ನು ತೋಡಿಕೊಂಡಾಗ ರಾಜ ಸೂರ್ಯಧ್ವರ ಯಾಗವನ್ನು ಮಾಡುವಂತೆ ತಿಳಿ ಹೇಳುತ್ತಾನೆ. ರಾಜ ಸೂರ್ಯದ್ವಾರಯಾಗವನ್ನು ಮಾಡಲು ಪಾಂಡವರು ಸಂಕಲ್ಪಿಸುತ್ತಾರೆ. ಯಾಗ ನಿಮಿತ್ತ ಜರುಗುವ ಅನ್ನಸಂತ ರ್ಪಣೆಯ ಬಳಿಕ ಯಾಗ ಮಂಟಪದ ಪರಿಶುದ್ಧತೆಗಾಗಿ ನೈರ್ಮಲ್ಯಕ್ಕಾಗಿ ಮಹೇಂದ್ರ ಗಿರಿಯಲ್ಲಿರುವ ದೇವ ಮೃಗವಾದ ಪುರುಷತ್ವಗವನ್ನು ಬರಮಾಡಲು ಶ್ರೀ ಕೃಷ್ಣ ಸೂಚಿಸುತ್ತಾನೆ. ಶ್ರೀ ಕೃಷ್ಣನಿಂದ ನಿಯೋಜಿಸಲ್ಪಟ್ಟ ಭೀಮಸೇನ ಮಹೇಂದ್ರ ಗಿರಿಯೊಳಡಗಿ ವಾಯುಮಾರ್ಗದಲ್ಲಿ ಸಂಚರಿಸುತ್ತಾನೆ. ತ್ರೇತ್ರಾಯುಗದಲ್ಲಿ ಹನುಮಂತ ವಾಯುಕ್ಷೇತ್ರದಲ್ಲಿ ವೃದ್ಧಾಪ್ಯದಿಂದ ಬಳಲಿಪವಡಿಸಿರುತ್ತಾನೆ. ಆತನ ಉದ್ದವಾಗಿ ಚಾಚಿದ ಬಾಲವನ್ನು ದಾಟದೆ, ಸಾಗಲಾಗದ ಭೀಮಸೇನ ಬಾಲವನ್ನು ಸರಿಪಡಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಭೀಮನನ್ನೆಸರಿಸುವಂತೆ ಆಂಜನೇಯ ತಿಳಿಸಲು ಭೀಮ ತನ್ನ ಭೀಮ ಬಲವನ್ನು ಪ್ರಯೋಗಿಸಿ ಎತ್ತಲು ಉಪಕ್ರಮಿಸುತ್ತಾನೆ. ಒಂದಿಂಚು ಕದಲದಿರುವುದನ್ನು ಕಂಡು ಸೋತು ಹನುಮಂತನಲ್ಲೇ ಸರಿಸುವಂತೆ ನಿವೇದಿಸುತ್ತಾನೆ. ಆಗ ಅವರೊಳಗೆ ಸಂವಾದವೇರ್ಪಟ್ಟು ಬಂದ ಉದ್ದೇಶವನ್ನು ತಿಳಿದು ತನ್ನ ಬಾಲದ ರೋಮಗಳನ್ನು ರಕ್ಷೆಯಾಗಿತ್ತು, ಹರಸಿ ಕಳುಹಿಸುತ್ತಾನೆ. ಆಂಜನೇಯ ಹೀಗೆ ಮಹೇಂದ್ರ ಗಿರಿಯನ್ನು ಸೇರಿದ ಭೀಮ ಪುರುಷಾಮೃಗವನ್ನು ಭೇಟಿಯಾಗಿ ಬಂದ ಉದ್ದೇಶವನ್ನು ತಿಳಿಸಲು ದೇವ ಮೃಗ ಷರತ್ತನೊಡ್ದುತ್ತಾನೆ. ಮನೋವೇಗದಿಂದ ಸಂಚರಿಸುವ ಮೃಗದ ಷರತ್ತನ್ನು ಹನುಮ ರೋಮದ ರಕ್ಷೆಯ ಆಧಾರದಲ್ಲಿ ಸ್ವೀಕರಿಸಿ ಭೀಮಸೇನ ತನ್ನ ನಿಶ್ಚಿತ ಗುರಿಯತ್ತಾ ದೌಡಾಯಿಸುತ್ತಾನೆ. ಹಿಂಬಾಲಿಸಿದ ಪುರುಷಮೃಗ ಬೆನ್ನಟ್ಟುತ್ತದೆ. ಆಪತ್ತಿಗೆ ಸಿಲುಕಿದಾಗ ಹನುಮರೋಮಗಳನ್ನು ಚೆಲ್ಲುತ್ತಾನೆ. ಆಗ ಒಂದೊಂದು ರೋಮದಲ್ಲೂ ಒಂದೊಂದು ಶಿವಲಿಂಗ ಉದ್ಭವವಾಗುತ್ತದೆ. ಶಿವಾರ್ಚನೆಯನ್ನು ಮಾಡದೆ ದೇವಮೃಗ ಮುಂದೆ ಸಾಗದು. ಹೀಗೆ ಉಪ್ಪಿನಂಗಡಿಯ ಸಮೀಪಕ್ಕೆ ಬಂದಾಗ ದೇವಮೃಗದ ಕದಂಭ ಬಾಹುವಿಗೆ ಸಿಲುಕುವ ಪ್ರಮೇಯ ಬಂದಾಗ ತನ್ನ ಕೈಗಳಲ್ಲಿ ಉಳಿದ ಸಹಸ್ರರೋಮಗಳನ್ನು ಭೀಮ ಚೆಲ್ಲುತ್ತಾನೆ. ಸಹಸ್ರ ರೋಮಗಳಿಂದ ಸಹಸ್ರ ಲಿಂಗಗಳು ಉದ್ಭವವಾಗುತ್ತದೆ. ಸಹಸ್ರಲಿಂಗಗಳಿಗೆ ಶಿವಾರ್ಚನೆಯನ್ನು ಮಾಡುವ ಸಮಯದಲ್ಲಿ ಭೀಮಸೇನ ಯಾಗ ಮಂಟಪವನ್ನು ಸೇರುತ್ತಾನೆ. ಈಗಲೂ ಸಹಸ್ರಲಿಂಗಗಳು ಭೂಕಳದಲ್ಲಿ ಇದೆಯೆಂದೂ ಪ್ರತೀತಿ ಅದರಲ್ಲಿ ಒಂದು ಲಿಂಗ ನದಿಯ ಮಳಲ ಮಧ್ಯೆ ಇದ್ದು ಫೆಬ್ರವರಿ ತಿಂಗಳಲ್ಲಿ ದರ್ಶನಕ್ಕೆ ದೊರಕುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ನೆರಳಿನ ವ್ಯವಸ್ಥೆ
7
ಸರತಿ ಸಾಲಿನ ವ್ಯವಸ್ಥೆ
8
ಜಾತ್ರೆಯ ಮುಂಜಾಗ್ರತಾ ಕ್ರಮ
9
ಉದ್ಯಾನವನ/ತೋಟಗಾರಿಕೆ
10
ಸಾರ್ವಜನಿಕ ಮಾಹಿತಿ ಕೇಂದ್ರ
11
ಆರೋಗ್ಯ ಕೇಂದ್ರ
12
ಅನ್ನ ಛತ್ರ
13
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಅಷ್ಟಮಿ ಮಖೆ ಕೂಟ
2
ಶಿವರಾತ್ರಿ ಮಖೆ ಕೂಟ
3
ಹುಣ್ಣಿಮೆ ಮಖೆ ಕೂಟ
4
ಮಹಾಕಾಳಿ ಮೆಚ್ಚಿ
5
ಲಕ್ಷದೀಪೋತ್ಸವ ಮತ್ತು ಮಕರ ಸಂಕ್ರಮಣ, ನವರಾತ್ರಿ ಉತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 35.00
2
ಶ್ರೀ ಕಲ್ಕುಡ ಮಂಗಳವಾರ ಪೂಜೆ 500.00
3
ಎಣ್ಣೆ ಅಭಿಷೇಕ 250.00
4
ಸೇಸೆ ಅರ್ಚನೆ 150.00
5
ಮದುವೆ 750.00
6
ಅಶ್ವಥ ಪೂಜೆ 150.00
7
ನವರಾತ್ರಿ ಪೂಜೆ 2200.00
8
ನಾಗ ತಂಬಿಲ 300.00
9
ಏಕಾದಶ ರುದ್ರಾಭಿಷೇಕ 3000.00
10
ಶ್ರೀ ಸತ್ಯನಾರಾಯಣ ಪೂಜೆ 1000.00
11
ಪಿಂಡ ಪ್ರದಾನ 850.00
12
ರಂಗ ಪೂಜೆ 2000.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ 0140220408 ಉಪ್ಪಿನಂಗಡಿ ಪುತ್ತೂರು ತಾಲೂಕ ಉಪ್ಪಿನಂಗಡಿ SYNB0000140

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ