Share on Social Networks


 Share

ವಿವರಗಳು

ಶ್ರೀ ಅನಂತ ಪದ್ಮನಾಭ ಸುಬ್ರಮಣ್ಯ ದೇವರು:ಶ್ರೀ ಮಹಾಗಣಪತಿ:ಶ್ರೀ ಲಕ್ಷ್ಮಿ:ನವಗೃಹ:ಅಯ್ಯಪ್ಪ:ನಾಗಬನ

ಶ್ರೀ ಅನಂತ ಪದ್ಮನಾಭ ದೇವಸ್ಥಾನ , ಕುಡುಪು ,

ಮಂಗಳೂರು,

ದಕ್ಷಿಣಕನ್ನಡ

ಕುಡುಪು :- 575028

ರೈಲು ಮಾರ್ಗ : ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ , ರಾಷ್ಟೀಯ ಹೆದ್ದಾರಿ 169

ಬಸ್ ಮಾರ್ಗ : ಮಂಗಳೂರು ಕಾರ್ಕಳ ಮಾರ್ಗವಾಗಿ ಹಾಡು ಹೋಗುವ ಎಲ್ಲಾ ಬಸ್ಸುಗಗು.

ಕಾರು ಅಥವಾ ರಿಕ್ಷಾ ಮಾರ್ಗ :  ರಾಷ್ಟೀಯ ಹೆದ್ದಾರಿ 169

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 06:30

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 07:30

ದೂರವಾಣಿ: 9343390157

ಇಮೇಲ್: kuduputemple@gmail.com

ವೆಬ್ ಸೈಟ್: www.kuduputemple.com

ಇತಿಹಾಸ

ಒಮ್ಮೆ ನಾರದ ಮಹರ್ಷಿ ಲೋಕ ಸಂಚಾರ ಮಾಡುತ್ತಾ ಬ್ರಹ್ಮ ಲೋಕಕ್ಕೆ ಹೋಗಿ ಅಲ್ಲಿ ಚತುರ್ಮುಖ ಬ್ರಹ್ಮ ದೇವರನ್ನು ಕಂಡು ವಂದಿಸಿ ಮುಂದೆ ಘೋರವಾದ ಕಲಿಯುಗ ಬರಲಿದೆ. ಆಗ ಜನರೆಲ್ಲಾ ಪಾಪಕೃತ್ಯಗಳಲ್ಲಿ ತೊಡಗುತ್ತಾರೆ. ಅವರಿಗೆ ತಾವೇನು ಮಾಡುತಿರುವೆವೆಂದು ತಿಳಿದಿರುವುದಿಲ್ಲ. ಆದುದರಿಂದ ಅವರು ತಮ್ಮ ದುಷ್ಕರ್ಮಕ್ಕೆ ತಕ್ಕ ಫಲವನ್ನು ಅನುಭವಿಸಬೇಕಾಗುತ್ತದೆ. ಭೂಲೋಕದಲ್ಲಿ ಕದಳಿ ದೊಡ್ಡ ಅರಣ್ಯವಿದೆ. ಇದು ದಶಾರಣ್ಯಗಳಲ್ಲಿ ಒಂದು. ಇದರ ಮದ್ಯದಲ್ಲಿ ಭಾದ್ರಾ ಸರಸ್ವತಿ ಎಂಬ ಪಾವನವಾದ ಸರೋವರವಿದೆ. ಇದು ಪ್ರಶಾಂತವಾದ ಪವಿತ್ರವಾದ ತಾಣವಾಗಿದೆ. ಈ ತೀರ್ಥದಿಂದ ದಕ್ಷಿಣ ದಿಕ್ಕಿಗೆ ಒಂದು ಯೋಜನಾ ದೂರದಲ್ಲಿ ವೇದ ಅಧ್ಯಾಯನ ಸಂಪನ್ನನೂ ಸ್ವಧರ್ಮನಿರತನೂ ಆದ ಸುಮಂತು ಎಂಬ ಹೆಸರಿನ ಬ್ರಾಹ್ಮಣನಿದ್ದನು. ಅವನಿಗೆ ಕೇದಾರನೆಂಬ ಮಗನಿದ್ದ. ಪರಬ್ರಹ್ಮ ಪಾರಾಯಣನಾಗಿದ್ದ ಆ ಕೇದಾರನಿಗೆ ಬಹುಕಾಲ ಪುತ್ರ ಸಂತತಿ ಆಗಲಿಲ್ಲ. ಒಮ್ಮೆ ಆತ ಪುತ್ರಕಾಮನಾಗಿ ಅಲೆದಾಡುತ್ತಾ ಭದ್ರಾಸರಸ್ವತೀ ತೀರ್ಥದ ತಡಿಗೆ ಬಂದ. ಕೇದಾರನು ಆ ತೀರ್ಥದ ತೀರದಲ್ಲಿ ತಪೋನಿರತನಾಗಿದ್ದ ಋಷಿ ಶೃಂಗ ಮುನಿಯನ್ನು ನೋಡಿದ. ಆಗ ಶೃಂಗ ಮುನಿಯು ಈ ರೀತಿ ಹೇಳಿದರು. ಕೇದಾರನೇ ನೀನು ನಿತ್ಯವೂ ಇಲ್ಲಿ ಸ್ನಾನ ಮಾಡಿ ಸುಬ್ರಮಣ್ಯನನ್ನು ಆರಾಧಿಸು, ನಿನ್ನ ಭಕ್ತಿಗೆ ಮೆಚ್ಚಿ ಆತ ನಿನಗೆ ಕಾಣಿಸಿಕೊಂಡು ನಿನ್ನ ಇಚ್ಛೆಯನ್ನು ಅನುಗ್ರಹಿಸುವನು ಎಂದು ಹೇಳಿದರು. ಕೇದಾರನ ತಪಸ್ಸಿನ ಪ್ರಭಾವದಿಂದ ಸುತ್ತ ಮುತ್ತಲಿನ ವಾತಾವರಣದಲ್ಲಿ ಮೊದಮೊದಲು ಶಾಂತಿಯೂ ಪ್ರಸನ್ನತೆಯೂ ಕಾಣಿಸಿಕೊಂಡವು. ನಾರಾಯಣನು ಸುಬ್ರಮಣ್ಯನನ್ನು ಕರೆದು ಎಲೈ ಷಣ್ಮುಖನೇ ಭೂಲೋಕದಲ್ಲಿ ಕೇದಾರನೆಂಬ ಬ್ರಾಹ್ಮಣನು ಸಂತಾನ ಪಡೆಯುವ ಇಚ್ಛೆಯಿಂದ ಭದ್ರ ಸರಸ್ವತಿ ತೀರದಲ್ಲಿ ನಿನ್ನನು ಕುರಿತು ತಪಸ್ಸು ಮಾಡುತ್ತಿದ್ದಾನೆ. ನೀನು ಕೂಡಲೇ ಅಲ್ಲಿ ಹೋಗಿ ಅವನನ್ನು ಅನುಗ್ರಹಿಸಿ ತಪಸ್ಸನ್ನು ನಿಲ್ಲಿಸು ಎಂದು ಆಜ್ಞಾಪಿಸಿದನು.ಅದಕ್ಕೆ ಷಣ್ಮುಖನು ಹೀಗೆಂದ, ಕೇದಾರನು ಮೋಕ್ಷಕ್ಕೆ ಹೋಗತಕ್ಕವನೇ ಹೊರತು ಸಂತತಿಯನ್ನು ಪಡೆಯತಕ್ಕವನಲ್ಲ.ಆದುದರಿಂದಲೇ ನಾನು ಅವನಿಗೆ ಸಂತತಿಯನ್ನು ಕೊಡಲಿಲ್ಲ . ಇನ್ನು ನಿನ್ನ ಸಂಕಲ್ಪದಂತೆ ಅವನಿಗೆ ವಿಶಿಷ್ಟವಾದ ಸಂತತಿಯನ್ನು ಕೊಟ್ಟು ಅನುಗ್ರಹಿಸಲು ಈಗಲೇ ಹೋಗುವೆನು ಎಂದು ಕೇದಾರನಿದ್ದಲಿಗೆ ಹೋಗಿ ಅವನಿಗೆ ಬೇಕಾದ ವರವನ್ನು ಕೇಳಲು ಹೇಳಿದನು.ಅದಕ್ಕೆ ಕೇದಾರನು ಸಂತತಿಯನ್ನು ಕರುಣಿಸಲು ವರವನ್ನು ಕೇಳಿದನು. ಕೆಲವು ದಿನ ಕಳೆಯಿತು. ದಂಪತಿಗಳು ತೀರ್ಥಸ್ನಾನ ಮಾಡಿ ಸುಬ್ರಮಣ್ಯನನ್ನು ಆರಾಧಿಸುತ್ತಲೇ ಇದ್ದರು. ಒಂದು ವರ್ಷದಲ್ಲಿ ಕೇದಾರನ ಪತ್ನಿ ಗರ್ಭವತಿಯಾದಳು. ನವಮಾಸ ತುಂಬಿ ಈಕೆ ಸರ್ಪನ ಮುರು ಅಂಡಗಳನ್ನು ಹಡೆದಳು. ಇದರ ಬಗ್ಗೆ ಕೇದಾರನು ದುಃಖಿತಗೊಂಡಾಗ ಅವನಿಗೊಂದು ಅಶರೀರವಾಣಿಯೊಂದು ಕೇಳಿಸಿತು ಈ ಉರಗಾಂಡಗಳು ಮಹಾಶೇಷ, ಮಹಾವಿಷ್ಣು, ಮತ್ತು ಸುಬ್ರಮಣ್ಯ ಸ್ವರೂಪಿಗಳು. ಎಲ್ಲ ಸರ್ಪದ ಮೊಟ್ಟೆಗಳಂತಲ್ಲ. ಲೋಕಾನುಗ್ರಹಕ್ಕಾಗಿ ಮತ್ತು ನಿನ್ನ ಒಳಿತಿಗಾಗಿ ಈ ತ್ರಿಮೂರ್ತಿಗಳು ನಿನ್ನ ಗೋತ್ರಜರಾಗಿ ನಿನ್ನ ಧರ್ಮಪತ್ನಿಯ ಗರ್ಭದಲ್ಲಿ ಆವಿರ್ಭವಿಸಿದರು. ಈ ಸಂತತಿಯ ಹೊರತು ನಿನಗೆ ಬೇರೆ ಸಂತತಿಯಾಗಲಾರವು. ಕಾರಣ ನೀನು ಮೋಕ್ಷವನ್ನು ಪಡೆಯತಕ್ಕವನು. ಭದ್ರಾ ಸರಸ್ವತಿ ತೀರದಲ್ಲಿ ನೀನು ಎಲ್ಲಿ ಸ್ಕಂದೋಪಾಸನೆ ಮಾಡಿರುವಿಯೋ ಆ ಸ್ಥಳದಲ್ಲಿ ಈ ಅಂಡಗಳನ್ನು ಗುಪ್ತವಾಗಿ ಪ್ರತಿಷ್ಠೆ ಮಾಡು. ನಾನು ಮಹಾಶೇಷನಾಗಿ ಬಂದು ಅಲ್ಲಿ ನೆಲೆಸುವೆನು. ನೀನು ಪದ್ಮನಾಭ ಸ್ವಾಮಿಯನ್ನು ಪೂಜಿಸುತ್ತಾ ಬಂದಲ್ಲಿ ಕೊನೆಗೆ ನಿನಗೆ ಮೋಕ್ಷ ದೊರೆಯುತ್ತದೆ. ಮುಂದೆ ಈ ಕ್ಷೇತ್ರವು ಅನಂತಪದ್ಮನಾಭ ಸ್ವಾಮಿಯ ಕ್ಷೇತ್ರವೆಂದು ಪ್ರಖ್ಯಾತವಾಗುವುದು. ಈ ತೀರ್ಥದಲ್ಲಿ ಯಾರು ಸ್ನಾನ ಮಾಡಿ ಭಕ್ತಿಯಿಂದ ಅನಂತಪದ್ಮನಾಭ ಸ್ವಾಮಿಯನ್ನು ಆರಾಧಿಸುತ್ತಾರೋ ಅವರಿಗೆ ಸಂತಾನ ಪ್ರಾಪ್ತಿಯೂ, ಸಕಲ ಪಾಪ ವಿಮೋಚನೆಯೂ. ಕುಷ್ಠಾದಿ ರೋಗಗಳಿಂದ ಮುಕ್ತಿಯೂ ಲಭಿಸುವುದು. ಮುಂದೆ ಈ ಕ್ಷೇತ್ರವೇ ಕುಡುಪು ಕ್ಷೇತ್ರವೆಂದು ಪ್ರಸಿದ್ಧವಾಯಿತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ವಿಶ್ರಾಂತಿ ಗೃಹ
7
ನೆರಳಿನ ವ್ಯವಸ್ಥೆ
8
ಸರತಿ ಸಾಲಿನ ವ್ಯವಸ್ಥೆ
9
ಜಾತ್ರೆಯ ಮುಂಜಾಗ್ರತಾ ಕ್ರಮ
10
ದಾಸೋಹ ವ್ಯವಸ್ಥೆ
11
ಉದ್ಯಾನವನ/ತೋಟಗಾರಿಕೆ
12
ಸಾರ್ವಜನಿಕ ಮಾಹಿತಿ ಕೇಂದ್ರ
13
ಆರೋಗ್ಯ ಕೇಂದ್ರ
14
ಅನ್ನ ಛತ್ರ
15
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರ ಪಂಚಮಿ
2
ಋಗುಉಪಾಕರ್ಮ
3
ಗೋಕುಲಾಷ್ಟಮಿ, ಚೌತಿ
4
ಅನಂತ ವೃತ, ದೀಪಾವಳಿ
5
ನವರಾತ್ರಿ, ಷಷ್ಠಿ, ಕಿರುಷಷ್ಟಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಪಂಚಾಮೃತ 40.00
2
ಕಾರ್ತಿಕ ಪೂಜೆ 30.00
3
ತಂಬಿಲ 50.00
4
ಕ್ಷೀರಾಭಿಷೇಕ 30.00
5
ಸಹಸ್ರನಾಮ ಅರ್ಚನೆ 30.00
6
ಅಷ್ಟೋತ್ತರ ಅರ್ಚನೆ 30.00
7
ಪಂಚ ಕಜ್ಜಾಯ 10.00
8
ಹಾಲು ಪಾಯಸ 30.00
9
ಪುರುಷ ಸೂಕ್ತ ಅಭಿಷೇಕ 30.00
10
ಅಮೃತಪಡಿ ನಂದಾದೀಪ 80.00
11
ಅಪ್ಪ ಕಜ್ಜಾಯ 60.00
12
ಆಶ್ಲೇಷ ಬಲಿ 700.00
13
ರಾತ್ರಿ ಹೂವಿನ ಪೂಜೆ 350.00
14
ಪವಮಾನ ಅಭಿಷೇಕ 500.00
15
ಒಂದು ದಿನದ ಮಹಾಪೂಜೆ 200.00
16
ಮದ್ಯಾಹ್ನದ ಹೂವಿನ ಪೂಜೆ 70.00
17
ಅಯ್ಯಪ್ಪ ಸ್ವಾಮಿ ಪೂಜೆ 50.00
18
ನವಗೃಹ ಗುಡಿಯಲ್ಲಿ ನವಗೃಹ ಪೂಜೆ 50.00
19
ಶಾಶ್ವತ ಸೇವೆ 2000.00
20
ಶಾಶ್ವತ ಅನ್ನದಾನ ಸೇವಾ 5000.00
21
ಸರ್ಪ ಸಂಸ್ಕಾರ 7000.00
22
ನಾಗಪ್ರತಿಷ್ಠೆ 12000.00
23
ಆಶ್ಲೇಷ ಬಲಿ ಉದ್ಯಾವನೆ 15000.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10023530981 ಕುಲಶೇಖರ ಕುಲಶೇಖರ SBIN0007983

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ