ಕಾರ್ಯಕ್ರಮಗಳು

ಶ್ರೀ ವರಮಹಾಲಕ್ಷ್ಮಿ ಪೂಜೆಕಾರ್ಯಕ್ರಮದ ಬಗ್ಗೆ :
ಶ್ರಾವಣ ಮಾಸ ತ್ರಯೋದಶಿ ತಾ.24 -08 -2018 ರ ಶುಕ್ರವಾರದಂದು ಬೆಳಿಗ್ಗೆ ಗಂಟೆ 10 .30 ಕ್ಕೆ ಕಲಶ ಸ್ಥಾಪಿಸಿ "ಶ್ರೀ ವರಮಹಾಲಕ್ಷ್ಮಿ ಪೂಜೆ" ಯನ್ನು ಶ್ರೀ ಕ್ಷೇತ್ರದ ಮಹಿಳಾ ಮಂಡಳಿಯ ಸಹಕಾರದೊಂದಿಗೆ ಸಾಮೂಹಿಕವಾಗಿ ಆಚರಿಸಲಾಗುವುದು. ವಿಶೇಷವಾಗಿ ಸುವಾಸಿನಿಯರು ಸೌಭಾಗ್ಯ ಪೂಜೆಯನ್ನು ಸಲ್ಲಿಸಿ, ಶ್ರೀ ವರಮಹಾಲಕ್ಷ್ಮಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರುತ್ತೇವೆ. ಕಾರ್ಯಕ್ರಮಗಳು ಬೆಳಿಗ್ಗೆ ಘಂಟೆ 10 :30 ಕಲಶ ಸ್ಥಾಪನೆ ಮಧ್ಯಾಹ್ನ ಘಂಟೆ 12 :30 ಮಹಾಪೂಜೆ (ಮಹಾಪೂಜೆ ನಂತರ ಅನ್ನಸಂತರ್ಪಣೆ ಶ್ರೀ ಕ್ಷೇತ್ರದ ಮಹಿಳಾ ಮಂಡಳಿಯ ವತಿಯಿಂದ) ಸಾಯಂಕಾಲ ಘಂಟೆ 06:30 ಕಥಾಶ್ರವಣ ಮತ್ತು ಸೌಭಾಗ್ಯ ವಿತರಣೆ ರಾತ್ರಿ ಘಂಟೆ 08 :30 ಮಹಾಪೂಜೆ ಸೌಭಾಗ್ಯ ಪೂಜೆ ಬಾಬ್ತು ರೂ.100 /- ಅದೇ ದಿನ ಬೆಳಿಗ್ಗೆ ಗಂಟೆ 10 ರಿಂದ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಬಂದಂತಹ ಸೀರೆಗಳನ್ನು ಏಲಂ ಮಾಡಲಾಗುವುದು.
  • ಸ್ಥಳ : ಹಳೇಕೋಟೆ ಮಾರಿಯಮ್ಮ ದೇವಸ್ಥಾನ
  • ವಿಳಾಸ : ಬೋಳಾರ, ಮಂಗಳೂರು
  • ಸಂಪರ್ಕ ಸಂಖ್ಯೆ :
  • ಕಾರ್ಯಕ್ರಮದ ಪ್ರಾರಂಭ ದಿನಾಂಕ : 24-08-2018
  • ಕಾರ್ಯಕ್ರಮದ ಮುಕ್ತಾಯ ದಿನಾಂಕ : 24-08-2018
  • ಕಾರ್ಯಕ್ರಮದ ಪ್ರಾರಂಭ ಸಮಯ : 10:30 AM
  • ಕಾರ್ಯಕ್ರಮದ ಮುಕ್ತಾಯ ಸಮಯ : 18:30 PM