ದುರ್ಗಾಪರಮೇಶ್ವರಿ ದೇವಸ್ಥಾನ
ಕಟೀಲು
ವಿವರಗಳು
ದುರ್ಗಾ ಪರಮೇಶ್ವರಿ ದೇವರು:ಗಣಪತಿ ದೇವರು:ಶಾಸ್ತಾರ ದೇವರು :ನಾಗದೇವರು:ರಕ್ತೇಶ್ವರಿ ದೇವರು :ಬ್ರಹ್ಮ ದೇವರು :ಚಾಮುಂಡಿ ಧೂಮಾವತಿ ದೈವ
ಶ್ರೀ ದುರ್ಗಾಪರಮೇಶ್ವರಿ ದೇವರು, ಕಟೀಲು. ,
ಮಂಗಳೂರು,
ದಕ್ಷಿಣಕನ್ನಡ
ಕಟೀಲು :- 574148
ರೈಲು ಮಾರ್ಗ : ಮಂಗಳೂರು, ಬಿ.ಸಿ.ರೋಡ್, ಮುಲ್ಕಿ,ಸುರತ್ಕಲ್
ಬಸ್ ಮಾರ್ಗ : ಮಂಗಳೂರು, ಬಿ.ಸಿ.ರೋಡ್, ಮುಲ್ಕಿ,ಸುರತ್ಕಲ್
ಕಾರು ಅಥವಾ ರಿಕ್ಷಾ ಮಾರ್ಗ : ಮಂಗಳೂರು, ಬಿ.ಸಿ.ರೋಡ್, ಮುಲ್ಕಿ,ಸುರತ್ಕಲ್
ನಡೆಯುವ ಮಾರ್ಗ : -
ಬೆಳಿಗ್ಗೆ ಸಮಯ: 05:30
ಮಧ್ಯಾಹ್ನ ಸಮಯ: 12:30
ಸಂಜೆ ಸಮಯ: 07:30
ದೂರವಾಣಿ: 8242200361
ಇಮೇಲ್: admin@kateeldevi.in
ವೆಬ್ ಸೈಟ್: www.kateeldevi.in
ಇತಿಹಾಸ
ಈ ಕ್ಷೇತ್ರವು ನಿರ್ಜರಣ್ಯಾ ಎನ್ನುವ ಹೆಸರಿನ ಪ್ರದೇಶವಾಗಿದ್ದು ಜಾಬಾಲಿ ಋಷಿಯ ಶಾಪದಿಂದ ಕಾಮಧೇನುವಿನ ಮಗಳು ನಂದಿನಿಯು ಇಲ್ಲಿ ನದಿಯಾಗಿ ಹರಿಯುವಳು. ಶುಂಭನಿಶುಂಬರ ಮಂತ್ರಿಯಾಗಿದ್ದ ಅರುಣಾಸುರ ತಲೆತಪ್ಪಿಸಿಕೊಂಡು ಇಲ್ಲಿನ ಗುಹೆಯಲ್ಲಿ ತಪಸ್ಸನ್ನು ಮಾಡಿ ಬ್ರಹ್ಮನಿಂದ ವರ ಪಡೆಯುತ್ತಾನೆ. ಎರಡು ಕಾಲು, ನಾಲ್ಕು ಕಾಲುಗಳುಳ್ಳ ಪ್ರಾಣಿಗಳಿಂದ ಸೇರಿದ ಯಾವ ಶಕ್ತಿಯಿಂದಲೂ ಮರಣ ಬರಬಾರದೆಂಬ ವರ ಬಲದೊಂದಿಗೆ ಗಾಯತ್ರಿ ಮಂತ್ರದ ಉಪದೇಶವನ್ನು ಪಡೆದು, ದೇವಲೋಕಾದಿ ಎಲ್ಲಾ ಲೋಕಗಳನ್ನು ಜಯಿಸಿ ಅಧರ್ಮಿಯಾಗಿ ಮೆರೆಯುತ್ತಾನೆ. ಎಲ್ಲಾ ದೇವಾಧಿ ದೇವತೆಗಳು ದೇವಿಯನ್ನು ಮೊರೆ ಹೋದಾಗ ಅವಳು ಆತನ ವಧೆಗೈಯುವೆನೆಂದು ಅಭಯ ನೀಡಿ ಅರುಣಾಸುರರನ್ನು ಗಾಯತ್ರಿ ಮಂತ್ರದಿಂದ ವಿಮುಖಗೊಳಿಸಲು ನಿರ್ದೇಶನ ನೀಡುತ್ತಾಳೆ. ದೇವಿ ಮೋಹಿನಿ ಸ್ವರೂಪದಲ್ಲಿ ಅರುಣಾಸುರನನ್ನು ಆಕರ್ಷಿಸಿದಾಗ ಅರುಣಾಸುರ ಅವಳಲ್ಲಿ ಅನುರಕ್ತನಾಗಿ ಮದುವೆಯ ಬೇಡಿಕೆಯನ್ನು ನೀಡುತ್ತಾನೆ. ಒಪ್ಪದಾಗ ಬಲಾತ್ಕಾರಕ್ಕೆ ಮುಂದಾಗುತ್ತಾನೆ. ಆಗ ದೇವಿ ಆರು ಕಾಲುಗಳ ಭ್ರಮರ (ದುಂಬಿ) ದ ಅವತಾರದಿಂದ ಅರುಣಾಸುರನನ್ನು ಸಂಹರಿಸುತ್ತಾಳೆ. ಉಗ್ರ ಸ್ವರೂಪದ ಶಾಂತತೆಗಾಗಿ ಋಷಿ ಮುನಿಗಳು ಎಳನೀರು ಅಭಿಷೇಕ ಮಾಡುತ್ತಾರೆ. ನಂತರ ದೇವಿಯು ನಂದಿನಿಯ ಕಟಿ ಪ್ರದೇಶ ಅಂದರೆ ನದಿಯ ಮಧ್ಯಭಾಗ (ಸೊಂಟದಲ್ಲಿ) ಜನಿಸುತ್ತಾಳೆ. ನಂದಿನಿಯ ಕಟಿ ಪ್ರದೇಶದಲ್ಲಿ ಇರುವ ಭೂಮಿ ಎನ್ನುವ ಅರ್ಥದಲ್ಲಿ ಕಟಿ ಇಳಾ ಎನ್ನುವ ಸಂಸ್ಕ್ರತದ ಹೆಸರು ಪ್ರಾದೇಶಿಕವಾಗಿ "ಕಟೀಲು" ಎಂದಾಗಿದೆ. ನಂದಿನಿಯ ನದಿಯ ಮದ್ಯೆ ಎರಡು ದ್ವೀಪಗಳುಳ್ಳ ಅತ್ಯಂತ ರಮಣೀಯ ದೇವಸ್ಥಾನವೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.
ಫೋಟೋಗಳು
ಮೂಲಭೂತ ಸವಲತ್ತುಗಳು
ಸೌಕರ್ಯಗಳು
ಕ್ರ.ಸಂ. | ಮೂಲಭೂತ ಸವಲತ್ತುಗಳು |
---|---|
1 |
ಸ್ವಚ್ಛತೆ | 2 |
ವಸತಿ ಗೃಹ | 3 |
ಕುಡಿಯುವ ನೀರು | 4 |
ಪ್ರತ್ಯೇಕ ಶೌಚಾಲಯಗಳು | 5 |
ಸ್ನಾನ ಗೃಹ | 6 |
ಬಟ್ಟೆ ಬದಲಾಯಿಸಲು ಕೊಠಡಿ | 7 |
ನೆರಳಿನ ವ್ಯವಸ್ಥೆ | 8 |
ಸರತಿ ಸಾಲಿನ ವ್ಯವಸ್ಥೆ | 9 |
ಜಾತ್ರೆಯ ಮುಂಜಾಗ್ರತಾ ಕ್ರಮ | 10 |
ದಾಸೋಹ ವ್ಯವಸ್ಥೆ | 11 |
ಉದ್ಯಾನವನ/ತೋಟಗಾರಿಕೆ | 12 |
ಸಾರ್ವಜನಿಕ ಮಾಹಿತಿ ಕೇಂದ್ರ | 13 |
ಆರೋಗ್ಯ ಕೇಂದ್ರ | 14 |
ಅನ್ನ ಛತ್ರ | 15 |
ಸಮಾರಂಭದ ಹಾಲ್ |
ಪಂಚ ಪರ್ವಗಳು
ಕ್ರ.ಸಂ. | ಪಂಚ ಪರ್ವದ ಹೆಸರು |
---|---|
1 |
ನಾಗರ ಪಂಚಮಿ | 2 |
ಋಗುಉಪಾಕರ್ಮ | 3 |
ಶ್ರೀ ಕೃಷ್ಣ ಜನ್ಮಾಷ್ಟಮಿ | 4 |
ನವರಾತ್ರಿ, ಕದಿರು ಕಟ್ಟುವುದು | 5 |
ಗಣೇಶ ಚತುರ್ಥಿ , ದೀಪಾವಳಿ | 6 |
ವಾರ್ಷಿಕ ಜಾತ್ರೆ, ನವರಾತ್ರಿ |
ಪೂಜೆಗಳ ವಿವರ
ಕ್ರ.ಸಂ. | ಪೂಜೆಯ ಹೆಸರು | ದರ (ರೂ) |
---|---|---|
1 |
ಕಾರ್ತಿಕ ಪೂಜೆ | 10.00 | 2 |
ಹೂವಿನ ಪೂಜೆ | 120.00 | 3 |
ಕುಂಕುಮಾರ್ಚನೆ | 30.00 | 4 |
ಸಹಸ್ರ ನಾಮಾರ್ಚನೆ | 60.00 | 5 |
ದುರ್ಗಾ ನಮಸ್ಕಾರ | 60.00 | 6 |
ಪಂಚ ಕಜ್ಜಾಯ | 20.00 | 7 |
ಲಡ್ಡು ಪ್ರಸಾದ | 20.00 | 8 |
ಸಮೂಹ ಸೇವೆ | 100.00 | 9 |
ತ್ರಿಮಧುರ ನೈವೇದ್ಯ | 60.00 | 10 |
ಪಂಚಾಮೃತಾಭಿಷೇಕ | 70.00 | 11 |
ಶ್ರೀ ಸುಕ್ತಾಭಿಷೇಕ | 40.00 | 12 |
ಕರ್ಪೂರಾರತಿ | 30.00 | 13 |
ಅಲಂಕಾರ ಪೂಜೆ | 120.00 | 14 |
ಮಹಾ ಪೂಜೆ | 170.00 | 15 |
ಸರ್ವ ಸೇವೆ | 1000.00 | 16 |
ರಂಗ ಪೂಜೆ | 3000.00 | 17 |
ಮೃಷ್ಟಾನ್ನ | 250.00 | 18 |
ಕ್ಷೀರ ಪಾಯಾಸ | 80.00 | 19 |
ಹೂ ಪ್ರಶ್ನೆ | 20.00 | 20 |
ಅಮೃತಪಡಿ ನಂದಾದೀಪ | 120.00 | 21 |
ರಥ ಹೂವಿನ ಪೂಜೆ | 80.00 | 22 |
ನಾಮಕರಣ | 40.00 | 23 |
ತೀರ್ಥ ಬಾಟ್ಲಿ | 10.00 | 24 |
ತೀರ್ಥ ಸ್ನಾನ | 120.00 | 25 |
ಅನ್ನದಾನ ಸೇವೆ | 2500.00 | 26 |
ಮಹಾ ಅನ್ನದಾನ ಸೇವೆ | 20,000.00 | 27 |
ತುಲಾಭಾರ ಕಾಣಿಕೆ (ಭಾರದ ಸೊತ್ತು ಪ್ರತ್ಯೇಕ) | 200.00 | 28 |
ಸೀರೆ ಅಲಂಕಾರ (ಸೀರೆ ಪ್ರತ್ಯೇಕ ) | 40.00 | 29 |
ಚಿನ್ನದ ಪಾಲಕಿ ಉತ್ಸವ | 15000.00 | 30 |
ಅನ್ನ ಪ್ರಾಶನ | 30.00 | 31 |
ಅಕ್ಷರಾಭ್ಯಾಸ ಕಾಣಿಕೆ | 40.00 | 32 |
ಚಂಡಿಕಾಹೋಮ ಕಾಣಿಕೆ | 1501.00 | 33 |
ಬೆಳ್ಳಿ ರಥೋತ್ಸವ | 1501.00 | 34 |
ತ್ರಿಕಾಲ ಪೂಜೆ ಕಾಣಿಕೆ | 1001.00 | 35 |
ನವಗ್ರಹ ಹೋಮ ಕಾಣಿಕೆ | 501.00 | 36 |
ದುರ್ಗಾ ಹೋಮ ಕಾಣಿಕೆ | 501.00 | 37 |
ವಿವಾಹ ಕಾಣಿಕೆ | 301.00 | 38 |
ಗಣಹೋಮ ಕಾಣಿಕೆ | 75.00 | 39 |
ಸತ್ಯನಾರಾಯಣ ಕಥೆ ಕಾಣಿಕೆ | 75.00 | 40 |
ವಾಹನ ಪೂಜೆ | 10.00 | 41 |
ವಾಹನ ಪೂಜೆ | 15.00 | 42 |
ವಾಹನ ಪೂಜೆ | 20.00 | 43 |
ಸ್ವಯಂವರಪಾರ್ವತಿ ಅರ್ಚನೆ ಕಾಣಿಕೆ | 21.00 | 44 |
ಶನಿಶಾಂತಿ ಕಾಣಿಕೆ | 500.00 | 45 |
ಶನಿಕಥೆ ಕಾಣಿಕೆ | 100.00 |
ಬ್ಯಾಂಕ್ ವಿವರಗಳು
ಸಂಬಂಧಿತ ದೇವಾಲಯಗಳು (ಪ್ರವರ್ಗ - ಎ)
ಹತ್ತಿರದ ದೇವಾಲಯಗಳು (ಪ್ರವರ್ಗ - ಎ)
ವಿಮರ್ಶೆಗಳು
ಅತ್ಯುತ್ತಮ
0.0 / 5.0
0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ
ಸ್ಕೋರ್ ವಿಭಜನೆ
-
(0)
-
(0)
-
(0)
-
(0)
-
(0)