ಶ್ರಾವ್ಯ
03-08-2018
ಕುಕ್ಕೆ ಸುಬ್ರಮಣ್ಯ ದೇವಸ್ಥಾನವು ದಕ್ಷಿಣ ಕನ್ನಡ ದಲ್ಲಿ ಬಹಳ ಪ್ರಸಿದ್ಧವಾಗಿರುವ ದೇವಸ್ಥಾನವಾಗಿದೆ . ಪ್ರತಿಯೊಬ್ಬರೂ ಈ ಸುಂದರ ದೇವಸ್ಥಾನವನ್ನು ಭೇಟಿ ಮಾಡಬೇಕು. ಈ ಸ್ಥಳವು ಸ್ವರ್ಗದಂತಿದೆ.
ಸುಬ್ರಮಣ್ಯ
ಮಹಾಗಣಪತಿ :ಉಮಾಮಹೇಶ್ವರ :ಆದಿಸುಬ್ರಮಣ್ಯ:ಚಂದ್ರಮೌಳೇಶ್ವರ :ಬೀದಿ ಮುಖ್ಯಪ್ರಾಣ :ಕಾಶಿಕಟ್ಟೆ ಗಣಪತಿ :ಕಾಲ ಭೈರವ :ಮೂಲೆ ಮುಖ್ಯಪ್ರಾಣ , ಮೂಲೆ ಗಣಪತಿ :ಅಶ್ವಥ ನಾರಾಯಣ , ಭೂತ ಹೊಸಳಿತ್ತಾಯ :ಕುಕ್ಕೆ ಲಿಂಗ, ಶ್ರೀ ಸುಬ್ರಮಣ್ಯ ದೇವರು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ,
ಸುಳ್ಯ,
ದಕ್ಷಿಣ ಕನ್ನಡ
ಸುಬ್ರಮಣ್ಯ :- 574238
ರೈಲು ಮಾರ್ಗ : ಯಶವಂತಪುರ (ವಯಾ ಮೈಸೂರು ) ಸುಬ್ರಮಣ್ಯ ರೋಡ್ ರೈಲು ನಿಲ್ದಾಣ ಮಂಗಳೂರು - ಕಾರವಾರ, ಮಂಗಳೂರು - ಸುಬ್ರಮಣ್ಯ ರೋಡ್ ರೈಲು ನಿಲ್ದಾಣ
ಬಸ್ ಮಾರ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಜ್ಯದ ಎಲ್ಲಾ ವಿಭಾಗಗಳಿಂದ ಸಾಕಷ್ಟು ಬಸ್ಸಿನ ಸೌಕರ್ಯ ಇರುವುದಾಗಿದೆ
ಕಾರು ಅಥವಾ ರಿಕ್ಷಾ ಮಾರ್ಗ : ಕ್ಷೇತ್ರದಲ್ಲಿ ಖಾಸಗಿ ಕಾರು / ಆಟೋ ವ್ಯವಸ್ಥೆ ಇರುವುದಾಗಿದೆ.
ನಡೆಯುವ ಮಾರ್ಗ : ಕುಮಾರ ಪರ್ವತ ಚಾರಣಿಗರಿಗೆ ಮಾತ್ರ ಕಾಲುದಾರಿಯ ಉಪಯೋಗ ಇರುವುದಾಗಿದೆ.
ಬೆಳಿಗ್ಗೆ ಸಮಯ: 06:30
ಮಧ್ಯಾಹ್ನ ಸಮಯ: 12:00
ಸಂಜೆ ಸಮಯ: 07:30
ದೂರವಾಣಿ: 8257281224
ಇಮೇಲ್: eokukkesubrahmanya@gmail.com
ವೆಬ್ ಸೈಟ್: www.kukke.org
ಸಾವಂತರಕಲ್ಪದಲ್ಲಿ ಕದ್ರುವಿನತೆಯರೆಂಬ ಸ್ತ್ರೀಯರುಗಳಿಗೆ ಒಂದು ಕುದುರೆಯ ಬಣ್ಣದಲ್ಲಿ ಜಗಳ ಹುಟ್ಟಿತು. ಕದ್ರುವು ಕರಿ ಕುದುರೆಯೆಂದೂ, ಜಗಳವಾಡುತ್ತಾ, ಸೋತವರು ಗೆದ್ದವರಿಗೆ ದಾಸಿಯಾಗಿರಬೇಕೆಂದು ಭಾಷೆಯನ್ನಿಟ್ಟು ಕೊಂಡು ಮನೆಗೆ ಹೋದರು. ಕದ್ರುವು ನೀವು ಕುದುರೆಯನ್ನು ಕಡಿದು ವಿಷದಿಂದ ಕಪ್ಪಗೆ ಮಾಡಿರಿ ಎಂದು ತನ್ನ ಮಕ್ಕಳಾದ ಸರ್ಪಗಳಿಗೆ ತಿಳಿಸಿದಳು. ಅವು ಒಪ್ಪದಿರಲು, ಅತಿ ಕೋಪದಿಂದ ನಿಮ್ಮ ಕುಲವು ನಾಶವಾಗಲಿ ಎಂದು ಶಪಿಸಿದಳು . ಜನಮೇಜಯನ ಯಜ್ಞದಲ್ಲಿ ಕೆಲವು ಗರುಡನಿಂದ ಕೆಲವು ಸರ್ಪಗಳು ನಷ್ಟವಾಗಲು, ಭಯದಿಂದ ಕೆಲವು ಹುತ್ತಗಳಲ್ಲಿಯೂ, ದೊಗರುಗಳಲ್ಲಿಯೂ, ಪಾತಾಳದಲ್ಲಿಯೂ, ಅಡಗಿಕೊಂಡಿದ್ದು ಜೀವಿಸುತ್ತಿದ್ದವು. ಒಂದು ದಿನ ಗರುಡನು ಸರ್ಪಗಳನ್ನು ಹುಡುಕುತ್ತಾ ಬರುತ್ತಿರಲು, ಮಹಾ ಬಿಲದಲ್ಲಿ ವಾಸಮಾಡಿಕೊಂಡಿರುವ ವಾಸುಕಿಯನ್ನು ನೋಡಿ ಹಾರಿ ಬಂದು ಕೊಕ್ಕಿನಿಂದ ಕುಕ್ಕಿ ರೆಕ್ಕೆಯಿಂದ ಹೊಡೆದು, ಉಗುರಿನಿಂದ ಸೀಳಲು ಪ್ರಯತ್ನ ಮಾಡದಾಗಲೂ ಆ ಸರ್ಪರಾಜನ ಮಹಿಮೆಯಿಂದಲೂ, ವಿಷಜ್ವಾಲೆಯಿಂದಲೂ ಫನಾಫಣಿಗಳ ಕಾಂತಿಯಿಂದಲೂ ದಿಕ್ಕು ತೋಚದಂತಾಯಿತು. ಇವರಿಬ್ಬರೂ ಒಬ್ಬರನ್ನೊಬ್ಬರು ಗೆಲ್ಲಬೇಕೆಂದು ಹೋರಾಡುತ್ತಿರಲು ಕಶ್ಯಪರು ಬಂದು ಗರುಡನನ್ನು ಕುರಿತು ವತ್ಸಾ ವಾಸುಕಿಯನ್ನು ಬಿಡು, ಶಿವಭಕ್ತನಾದ ವಾಸುಕಿಯಲ್ಲಿ ನಿನ್ನ ಚೆಲ್ಲಾಟಗಳು ನಡೆಯಲಾರರು. ಎಂದು ತಿಳಿಸಲು ಗರುಡನು ಭೀತಿಯಿಂದ ಕಶ್ಯಪರು ವಂದಿಸಿ, ಸ್ವಾಮಿ ನಾನು ಹಸಿವಿನಿಂದ ಬಳಲಿದ್ದೇನೆ ಏನು ಮಾಡಲಿ ಎಂದು ಕೇಳಲು, ಗರುಡನೇ ನೀನು ರಮಣಕ ದ್ವೀಪಕ್ಕೆ ಹೋಗಿ ಬಹು ದುಷ್ಟರಾದ ಕಿರಾತರನ್ನೂ, ಸರ್ಪಗಳನ್ನೂ ಭಕ್ಷಿಸದ ಕಿರಾತರ ಮದ್ಯದಲ್ಲಿ ಒಬ್ಬ ಬ್ರಾಹ್ಮಣಾಧಮನು ಕಿರಾತೆಯ ಪ್ರೇಮದಿಂದ ವಾಸ ಮಾಡಿದ್ದಾನೆ. ಯಾರನ್ನು ತಿನ್ನುವಾಗ ನಿನ್ನ ಗಂಟಲು ಸುಡುವುದೋ ಅವನೇ ಬ್ರಾಹ್ಮಣನೆಂದು ತಿಳಿದು ಅವನನ್ನು ಉಗುಳಿ ಬಿಡು. ನಡೆ ನಿಲ್ಲಬೇಡ ಎಂದು ಹೇಳಿ ಕಳಿಸಿ ಕರುಣೆಯಿಂದ ವಾಸುಕಿಯನ್ನು ಮೈದಡವಿ ವತ್ಸ ವಾಸುಕಿ ನೀನು ಸಹ್ಯಾದ್ರಿಯ ಪುಣ್ಯಾಶ್ರಮಗಳಲ್ಲಿ ಪ್ರಸಿದ್ದವಾದ ಕುಮಾರ ಕ್ಷೇತ್ರಕ್ಕೆ ಹೋಗಿ ಭಕ್ತಿಯಿಂದ ಪರಮೇಶ್ವರನನ್ನು ಆರಾಧಿಸಿ ಕೃತಾರ್ಥನಾಗು . ಇನ್ನು ಮೇಲೆ ನಿನಗೆ ಗರುಡನ ಭಯವಿಲ್ಲ . ಪರಮೇಶ್ವರನ ಅನುಗ್ರಹದಿಂದ ಲೋಕಪೂಜ್ಯನಾಗು ಎಂದು ಹರಸಿ ಕಳುಹಿಸಿದರು. ವಾಸುಕಿಯು ಕಶ್ಯಪರಿಗೆ ನಮಸ್ಕರಿಸಿ , ಸಕುಟುಂಬಿಕರಾಗಿ ಕುಮಾರ ಕ್ಷೇತ್ರಕ್ಕೆ ಬಂದು ಶೈವ ವ್ರತವನ್ನು ಕೈ ಗೊಂಡು ಜಿತಕ್ರೋಧನಾಗಿ, ಜಿತೇಂದ್ರಿಯನಾಗಿ, ತ್ರಿಕಾಲದಲ್ಲಿಯೂ ಪರಮೇಶ್ವರನನ್ನು ಆರಾಧಿಸುತ್ತಾ, ಆಹಾರ ನಿದ್ರೆಗಳನ್ನು ತೊರೆದು ತಪಸ್ಸು ಮಾಡುತ್ತಿದ್ದನು .ಅದಕ್ಕೆ ಪ್ರಸನ್ನನಾದ ಪರಮೇಶ್ವರನು ನೀನು ಲೋಕಶಿಕ್ಷಣಾರ್ಥವಾಗಿ ತಪಸ್ಸನ್ನು ಮಾಡಿದೆ. ಮುಂದಿನ ಕಲ್ಪದಲ್ಲಿ ಕುಮಾರನಾದ ಷಣ್ಮುಖನು ತಾರಕಾದಿ ರಾಕ್ಷಸರನ್ನು ಸಂಹರಿಸಿ ಈ ಕ್ಷೇತ್ರಕ್ಕೆ ಬರುತ್ತಾನೆ. ಆಗ ಮಹೇಂದ್ರನು ತನ್ನ ಮಗಳಾದ ದೇವಾಸೇನೆಯನ್ನು ಕೊಟ್ಟು ಈ ಕ್ಷೇತ್ರದಲ್ಲಿ ಕಲ್ಯಾಣೋತ್ಸವವನ್ನು ಮಾಡಿಸುತ್ತಾನೆ. ಆಗ ನೀನು ಷಣ್ಮುಖನಿಂದ ಅನುಗ್ರಹಿತನಾದ ಈ ಕ್ಷೇತ್ರದಲ್ಲಿ ಅವನ ಕಲಶದಿಂದ ಕೂಡಿದವನಾಗಿ ಲೋಕಪೂಜ್ಯನಾಗುತ್ತಿ . ಯಾರು ನಿನ್ನ ನಾಮಸ್ಮರಣೆ ಮಾಡುವರೋ ಅವರಿಗೆ ಸಾಕಲಾಭೀಷ್ಟಗಳೂ ಸಿದ್ಧಿಸಲಿ. ಸುರನರೋರಗ ಸಿದ್ಧ ಚರಣಾದಿಗಳೆಲ್ಲರೂ ನಿನ್ನನ್ನು ನೆನಸಲಿ . ನಿನ್ನ ನಿವಾಸದಿಂದ ಪವಿತ್ರವಾದ ಈ ಕ್ಷೇತ್ರವು ನಿಖಿಲ ಸಿದ್ಧಿಗಳನ್ನೂ ಶೀಘ್ರದಲ್ಲಿಯೇ ಪ್ರಧಾನ ಮಾಡುವುದು. ನಿನಗೆ ಯಾವಾಗಲೂ ಗರುಡನಿಂದ ಭೀತಿ ಉಂಟಾಗಲಾರವು. ನನ್ನ ಪಾದಾಬ್ಜದಲ್ಲಿ ದೃಢವಾದ ಭಕ್ತಿಯಿರಲಿ. ಸಕುಟುಂಬಿಕನಾಗಿ ಸಕಲ ಕಲ್ಯಾಣಗಳನ್ನನುಭವಿಸುತ್ತಾ ಈ ಕ್ಷೇತ್ರದಲ್ಲಿ ವಾಸಮಾಡು. ಎಂದು ನಿರೂಪಿಸಿ ಅಂತರ್ಧಾನವನ್ನು ಹೊಂದಿದನು. ಸರ್ಪರಾಜನಾದ ವಾಸುಕಿಯು ಪರಮಾನಂದದಿಂದ ಸತಿಸುತ ಸಮೇತನಾಗಿ ಮೂಲ ಸುಬ್ರಹ್ಮಣ್ಯವೆಂಬ ಸ್ಥಳದಲ್ಲಿ ವಾಸ ಮಾಡುತ್ತಿದ್ದನು.
ಕ್ರ.ಸಂ. | ಮೂಲಭೂತ ಸವಲತ್ತುಗಳು |
---|---|
1 |
ಸ್ವಚ್ಛತೆ | 2 |
ವಸತಿ ಗೃಹ | 3 |
ಕುಡಿಯುವ ನೀರು | 4 |
ಪ್ರತ್ಯೇಕ ಶೌಚಾಲಯಗಳು | 5 |
ಸ್ನಾನ ಗೃಹ | 6 |
ಬಟ್ಟೆ ಬದಲಾಯಿಸಲು ಕೊಠಡಿ | 7 |
ನೆರಳಿನ ವ್ಯವಸ್ಥೆ | 8 |
ಸರತಿ ಸಾಲಿನ ವ್ಯವಸ್ಥೆ | 9 |
ಜಾತ್ರೆಯ ಮುಂಜಾಗ್ರತಾ ಕ್ರಮ | 10 |
ದಾಸೋಹ ವ್ಯವಸ್ಥೆ | 11 |
ಉದ್ಯಾನವನ/ತೋಟಗಾರಿಕೆ | 12 |
ಸಾರ್ವಜನಿಕ ಮಾಹಿತಿ ಕೇಂದ್ರ | 13 |
ಅನ್ನ ಛತ್ರ | 14 |
ಸಮಾರಂಭದ ಹಾಲ್ |
ಕ್ರ.ಸಂ. | ಪಂಚ ಪರ್ವದ ಹೆಸರು |
---|---|
1 |
ಚಂಪಾ ಷಷ್ಠಿ | 2 |
ಕಿರು ಷಷ್ಠಿ | 3 |
ರಥ ಸಪ್ತಮಿ | 4 |
ಕುಕ್ಕೆ ಲಿಂಗ ಜಾತ್ರೆ | 5 |
ಮಹಾ ಶಿವರಾತ್ರಿ, ನಾಗರ ಪಂಚಮಿ |
ಕ್ರ.ಸಂ. | ಪೂಜೆಯ ಹೆಸರು | ದರ (ರೂ) |
---|---|---|
1 |
ಮಹಾರಥೋತ್ಸವ | 25000.00 | 2 |
ಚಿಕ್ಕ ರಥೋತ್ಸವ | 8000.00 | 3 |
ಬೀದಿಯಲ್ಲಿ ಚಂದ್ರಮಂಡಲ ಉತ್ಸವ | 6000.00 | 4 |
ಬೀದಿಯಲ್ಲಿ ಹೂವಿನ ತೇರಿನ ಉತ್ಸವ | 5000.00 | 5 |
ರಾಜಾಂಗಣದಲ್ಲಿ ಶೇಷ ವಾಹನಯುಕ್ತ ಬಂಡಿ ಉತ್ಸವ | 3000.00 | 6 |
ಪಂಚಾಮೃತ ಮಹಾ ಅಭಿಷೇಕ | 6000.00 | 7 |
ದೀಪಾರಾಧನೆಯುಕ್ತ ಪಾಲಕಿ ಉತ್ಸವ | 2500.00 | 8 |
ಪಾಲಕಿ ಉತ್ಸವಯುಕ್ತ ಮಹಾಪೂಜೆ | 1500.00 | 9 |
ಇಡೀ ದಿನದ ಸಪರಿವಾರ ಸಂಕ್ಷಿಪ್ತ ಸೇವಾ | 2000.00 | 10 |
ಮಹಾಪೂಜೆ (ಇಡೀ ದಿನದ) | 400.00 | 11 |
ಮಹಾಪೂಜೆ(ಮದ್ಯಾಹ್ನ ವಿನಿಯೋಗ) | 250.00 | 12 |
ಪವಮಾನಯುಕ್ತ ಪಂಚಾಮೃತಾಭಿಷೇಕ | 100.00 | 13 |
ಕಲಶಪೂಜಾಯುಕ್ತ ಪಂಚಾಮೃತಾಭಿಷೇಕ | 100.00 | 14 |
ಪಂಚಾಮೃತಾಭಿಷೇಕ | 75.00 | 15 |
ರುದ್ರಾಭಿಷೇಕ | 75.00 | 16 |
ಕ್ಷೀರಾಭಿಷೇಕ | 50.00 | 17 |
ಶೇಷ ಸೇವೆ | 100.00 | 18 |
ಹರಿವಾಣ ನೈವೇದ್ಯ | 100.00 | 19 |
ಕಾರ್ತಿಕ ಪೂಜೆ | 50.00 | 20 |
ಪಂಚಕಜ್ಜಾಯ | 15.00 | 21 |
ಚಿತ್ರಾನ್ನ ಸಮರ್ಪಣೆ | 100.00 | 22 |
ಹಾಲು ಪಾಯಸ | 100.00 | 23 |
ಸಹಸ್ರನಾಮಾರ್ಚನೆ | 25.00 | 24 |
ಅಷ್ಟೋತ್ತರ ಅರ್ಚನೆ | 20.00 | 25 |
ಮೃಷ್ಟಾನ್ನ ಸಂತರ್ಪಣೆ | 500.00 | 26 |
ಸಂತರ್ಪಣೆ (೮ ಜನಕ್ಕೆ ) | 200.00 | 27 |
ನಂದಾದೀಪ (೧ ತಿಂಗಳಿಗೆ) | 400.00 | 28 |
ಡೋಲೋತ್ಸವ | 300.00 |
5.0 / 5.0
20% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ
03-08-2018
ಕುಕ್ಕೆ ಸುಬ್ರಮಣ್ಯ ದೇವಸ್ಥಾನವು ದಕ್ಷಿಣ ಕನ್ನಡ ದಲ್ಲಿ ಬಹಳ ಪ್ರಸಿದ್ಧವಾಗಿರುವ ದೇವಸ್ಥಾನವಾಗಿದೆ . ಪ್ರತಿಯೊಬ್ಬರೂ ಈ ಸುಂದರ ದೇವಸ್ಥಾನವನ್ನು ಭೇಟಿ ಮಾಡಬೇಕು. ಈ ಸ್ಥಳವು ಸ್ವರ್ಗದಂತಿದೆ.