Share on Social Networks


 Share

ವಿವರಗಳು

ಶ್ರೀ ಮಂಗಳಾದೇವಿ :ಶ್ರೀ ಮಹಾಗಣಪತಿ :ಶ್ರೀ ನಾಗದೇವರು :ಶ್ರೀ ರಕ್ತೇಶ್ವರಿ :ಶ್ರೀ ನಂದಿಕೋಣ :ಶ್ರೀ ಗುಳಿಗ

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಬೋಳಾರ ಮಂಗಳೂರು ,

ಮಂಗಳೂರು,

ದಕ್ಷಿಣ ಕನ್ನಡ

ಬೋಳೂರ್ :- 575003

ರೈಲು ಮಾರ್ಗ : ಮಂಗಳೂರು ಸೆಂಟ್ರಲ್

ಬಸ್ ಮಾರ್ಗ : ನ೦. ೨೭, ೧೫ ಎ ,೧೧ ಸಿ, ೯ ಸಿ, ೩ ಸಿ , ೧೩ ಸಿ .

ಕಾರು ಅಥವಾ ರಿಕ್ಷಾ ಮಾರ್ಗ : ಸ್ಟೇಟ್ ಬ್ಯಾಂಕ್ ೩ ಕೆ.ಎಂ ಕಂಕನಾಡಿ ೪ ಕೆ .ಎಂ

ನಡೆಯುವ ಮಾರ್ಗ : ಬೋಳಾರ - ಮಂಗಳಾದೇವಿ ಮುಖ್ಯ ರಸ್ತೆ

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 13:00

ಸಂಜೆ ಸಮಯ: 20:30

ದೂರವಾಣಿ: 2415476

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: www.mangaladevitemple.com

ಇತಿಹಾಸ

ಭಕ್ತರ ರಕ್ಷಣೆ ಹಾಗೂ ದುಷ್ಟರ ನಿಗ್ರಹಕ್ಕಾಗಿ ಭಗವಂತನಾದ ಶ್ರೀ ಹರಿಯು, ಆಗಾಗ ಭೂಮಿಯ ಮೇಲೆ ಅವತರಿಸುವನೆಂದು ನಾವು ನಮ್ಮ ಪುರಾಣಾದಿ ಗ್ರಂಥಗಳಿಂದ ತಿಳಿಯುತೇವ. ಅದೇ ತೆರನಾಗಿ ,ಸರ್ವರಕ್ಷಕಳಾದ ಮಹಾಮಾತೆಯಾದ ಶ್ರೀ ದೇವಿ ಕೂಡ ದುಷ್ಟ ರಾಕ್ಷಕರ ಸಂಹಾರಕ್ಕಾಗಿ ಕಾಣಿಸಿ ಕೊಂಡಿರುವುದು ಕಂಡು ಬರುತ್ತದೆ . ಪಶ್ಚಿಮ ಸಮುದ್ರ ತೀರದಲ್ಲಿರುವ ತುಳು ರಾಜ್ಯವನ್ನು ಸೂರ್ಯವಂಶದ ವೀರಬಾಹು ಎಂಬ ರಾಜನು ಆಳುತ್ತಿದ್ದನು. ಅವನ ರಾಜಧಾನಿಯ ಸನಿಹದಲ್ಲೇ ಪರಶುರಾಮನ ತಪೋಭೂಮಿ ಇದ್ದು, ಅವನ ಹತ್ತಿರದಲ್ಲೇ ಆಶ್ರಮವನ್ನು ನಿರ್ಮಿಸಿ ತಪೋಧನರಾದ ಭಾರದ್ವಾಜ ಮುನಿಗಳಿಗೆ ಕೈ ಮುಗಿದು, ಮುನಿವರ್ಯ ತಮ್ಮ ಪೂರ್ಣಾನುಗ್ರಹದಿಂದ ನಾನು ಧನ್ಯಥಾ ಭಾವವನ್ನು ಹೊಂದಿರುವೆನು.ಸ್ವಾಮಿ, ಕಾಲಧರ್ಮದಂತೆ ನಾನೀಗ ವೃದ್ಧನಾಗಿರುವೆನು. ಆ ಪ್ರಯುಕ್ತ ನಾನು ವಾನಪ್ರಸ್ಥಾಶ್ರಮವನ್ನು ಸೇರಬೇಕೆಂದಿರುವೆನು.ನಾನು ಸಂತಾನಹೀನನಾಗಿರುವುದರಿಂದ ಈ ತುಳುರಾಜ್ಯವನ್ನು ಯೋಗ್ಯನಾದ ಒಬ್ಬ ರಾಜನಿಗೆ ಕೊಡಬೇಕೆಂದಿರುವೆನು.ಮಹಾಮುನಿಶ್ರೇಷ್ಠರೇ ನನ್ನ ರಾಜ್ಯವನ್ನು ಬಂಗ ರಾಜನಿಗೆ ಉಚಿತವಾಗಿ ದಾನಮಾಡಿಕೊಟ್ಟು, ಮುಂದೆ ಭಗವಂತನ ಆರಾಧನೆಯಲ್ಲಿ ಕಾಲವನ್ನು ಕಳೆಯಬೇಕೆಂದಿರುವೆನು.ಈ ಕಾರ್ಯವನ್ನು ಸುಗಮವಾಗಿ ನೆರವೇರುವಂತೆ ಅನುಗ್ರಹಿಸಬೇಕಾಗಿ ವಿನೀತಭಾವದಿಂದ ಬೇಡಿಕೊಂಡನು.ವೀರ ಬಾಹುವಿನ ಕೋರಿಕೆಗೆ ಮೆಚ್ಚಿಗೆ ಸೂಚಿಸುತ್ತಾ, ಭಾರದ್ವಾಜ ಮುನಿಗಳು ಸಂತುಷ್ಟರಾಗಿ ಹಾಗೆಯೇ ಆಗಲೆಂದು ಹರಸಿದರು. ಒಮ್ಮೆ ಬಂಗರಾಜನು ತನ್ನ ಅರಮನೆಯ ಹಂಸತೂಲಿಕಾ ತಲ್ಪದಲ್ಲಿ ಮಲಗಿರಲು, ಬೆಳಗಿನ ಜಾವದಲ್ಲಿ ಶ್ರೀ ಮಂಗಳಾದೇವಿಯು ಸ್ವಪ್ನದಲ್ಲಿ ದರ್ಶನವನ್ನಿತ್ತು ರಾಜ ನಿನ್ನನ್ನು ಅನುಗ್ರಹಿಸಲಿಕ್ಕಾಗಿ ಪ್ರಸನ್ನಳಾಗಿರುವೆನು ನಾನು ಮಂಗಳಾದೇವಿ, ನೇತ್ರಾವತಿ ಮತ್ತು ಪಾಲ್ಗುಣಿ ನದಿಗಳು ಸಂಗಮವಾಗಿ ಸಮುದ್ರ ಸೇರುವ ಸನಿಹದಲ್ಲಿ ನನ್ನ ಲಿಂಗ ರೂಪದ ಬಿಂಬದಲ್ಲಿ ಚೈತನ್ಯವನ್ನು ಹೊಂದಿರುವೆನು. ಇದೀಗ ನನ್ನ ಆಲಯವು ಕುಸಿದು ಬಿದ್ದು ಒಂದು ದಿಣ್ಣೆಯಂತೆ ಕಾಣುತ್ತದೆ. ನೀನು ಆ ದಿಣ್ಣೆಯನ್ನು ಸರಿಸಿದಾಗ ನನ್ನ ಬಿಂಬ ನಿನಗೆ ಕಾಣ ಸಿಗುವುದು,ನೀನು ಅದೇ ಸ್ಥಳದಲ್ಲಿ ನನಗೊಂದು ಆಲಯವನ್ನು ನಿರ್ಮಿಸಿ ಬಿಂಬರೂಪದ ಲಿಂಗವನ್ನು ಪುನರ್ ಪ್ರತಿಷ್ಟಾಪಿಸು ಮತ್ತು ನನಗೆ ಧಾರಾಪಾತ್ರೆಯನ್ನಿಟ್ಟು ಹಾಗೆಯೇ ನನ್ನನ್ನು ಆರಾಧಿಸುತ್ತಿರು, ನಿನಗೆ ಮಂಗಳವಾಗಲಿ. ಈ ಪುಣ್ಯ ಕಾರ್ಯದಿಂದ ನೀನು ಲೋಕೋತ್ತರವಾದ ಕೀರ್ತಿಯನ್ನು ಪಡೆಯುವಿ, ಎಂದು ಹರಸಿ ಮಾಯವಾಗುವಳು. ನಿದ್ದೆಯಿಂದ ಎಚ್ಚೆತ್ತ ಬಂಗ ರಾಜನು ಕನಸಿನಲ್ಲಿ ಕಂಡ ದೇವಿಯನ್ನೇ ಧ್ಯಾನಿಸುತ್ತ ಬೆಳಗಿನ ಜಾವ ಕಳೆದ ನಂತರ ತನ್ನ ಪರಿವಾರದವರನ್ನು ಕರೆದು ಕನಸಿನಲ್ಲಿ ಕಂಡ ವಿಷಯ ತಿಳಿಸಿ ಅವರನ್ನೆಲ್ಲಾ ಕೂಡಿಕೊಂಡು ಭಾರದ್ವಾಜ ಮುನಿಗಳ ಆಶ್ರಮಕ್ಕೆ ಹೋಗಿ, ಮುನಿಗಳಿಗೆ ವಂದಿಸಿ, ತನಗೆ ಕನಸಿನಲ್ಲಿ ಕಂಡ ವಿಷಯವನ್ನು ತಿಳಿಸಿದನು. ಭಾರದ್ವಾಜ ಮುನಿಗಳು ಸಂತೋಷಗೊಂಡು ಆತನೊಂದಿಗೆ ಆ ದಿವ್ಯ ಸಾನಿಧ್ಯಕ್ಕೆ ತೆರಳುವರು. ಬಂಗರಾಜನು ಭಾರದ್ವಾಜ ಮುನಿಗಳಿಗೆ ನಮಿಸುತ್ತಾ ಪೂಜ್ಯ ಮುನಿವರ್ಯ ನಿಮ್ಮ ಅನುಗ್ರಹದಿಂದ ಶ್ರೀ ಮಂಗಳಾದೇವಿಯು ಬಿಂಬದ ಪುನರ್ ಪ್ರತಿಷ್ಠಾಪನೆಯು ನೆರವೇರಿತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಸಿ.ಸಿ ಕ್ಯಾಮೆರಾ
4
ಸೆಕ್ಯೂರಿಟಿ ಗಾರ್ಡ್
5
ಕಚೇರಿ ಸಿಬ್ಬಂಧಿ
6
ಅರ್ಚಕ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ಸರತಿ ಸಾಲಿನ ವ್ಯವಸ್ಥೆ
7
ಜಾತ್ರೆಯ ಮುಂಜಾಗ್ರತಾ ಕ್ರಮ
8
ದಾಸೋಹ ವ್ಯವಸ್ಥೆ
9
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಜಾತ್ರೋತ್ಸವ
2
ನವರಾತ್ರಿ
3
ಪ್ರತಿಷ್ಠಾಮಹೋತ್ಸವ
4
ಗಣೇಶ ಚತುರ್ಥಿ
5
ಕಾರ್ತಿಕ ಪೂಜೆ
6
ವಾರ್ಷಿಕ ಜಾತ್ರೆ,

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕರ್ಪೂರ ಆರತಿ 05.00
2
ಪಂಚ ಕಜ್ಜಾಯ 10.00
3
ಅಪ್ಪದ ಪ್ರಸಾದ 30.00
4
ಪಂಚಾಮೃತ ಅಭಿಷೇಕ 50.00
5
ಹೂವಿನ ಪೂಜೆ 100.00
6
ಗಣ ಹೋಮ (ಒಂದು ಕಾಯಿ ) 300.00
7
ಗಣ ಹೋಮ (ಮೂರು ಕಾಯಿ ) 500.00
8
ಗಣ ಹೋಮ ( ೧೦೮ ಕಾಯಿ ) 25000.00
9
ಸಣ್ಣ ರಂಗಪೂಜೆ (ರಾತ್ರಿ ) 1500.00
10
ಹಣ್ಣು ಕಾಯಿ ಕಾಣಿಕೆ 2.00
11
ಸೇಸೆ, ಕುಪ್ಪಸ, ದೃಷ್ಠಿ 10.00
12
ವಾಹನ ಪೂಜೆ(ದ್ವಿಚಕ್ರ ) 15.00
13
ವಾಹನ ಪೂಜೆ (ಇತರ) 25.00
14
ದೇವಿ ಮಹಾತ್ಮೆ ಪಾರಾಯಣ 50.00
15
ಅಷ್ಟೋತ್ತರ ಅರ್ಚನೆ 40.00
16
ತ್ರಿಶತಿ ಅರ್ಚನೆ 40.00
17
ಸೀರೆ ಕಾಣಿಕೆ 20.00
18
ಕುಂಕುಮಾರ್ಚನೆ 30.00
19
ದುರ್ಗಾ ನಮಸ್ಕಾರ 40.00
20
ಕಾರ್ತೀಕ ಪೂಜೆ 40.00
21
ಪುಷ್ಪಅಂಜಲಿ ಸೇವೆ 40.00
22
ತ್ರಿಮಧುರ ನೈವೇದ್ಯ 30.00
23
ಪಂಚಾಮೃತ ಅಭಿಷೇಕ 50.00
24
ಹಾಲು ಪಾಯಸ 50.00
25
ರುದ್ರಾಭಿಷೇಕ 50.00
26
ಕಲಶ ಸ್ನಾನ (ಬೆಳಿಗ್ಗೆ) 100.00
27
ನಾಗ ತಂಬಿಲ 75.00
28
ವಿದ್ಯಾರಂಭ 100.00
29
ಅಲಂಕಾರ ಪೂಜೆ 150.00
30
ಚಂಡಿಕಾ ಯಾಗ 23000
31
ನಿತ್ಯ ಮಹಾಪೂಜೆ(ನವರಾತ್ರಿ) 450.00
32
ನಿತ್ಯ ಮಹಾಪೂಜೆ 400.00
33
ಸ್ವಯಂವರ ಪಾರ್ವತಿ ಪೂಜೆ(ರಾತ್ರಿ) 300.00
34
ಶ್ರೀ ಸತ್ಯನಾರಾಯಣ ಪೂಜೆ 400.00
35
ಸಾರ್ವಜನಿಕ ಸತ್ಯನಾರಾಯಣ ಪೂಜೆ 100.00
36
ಶಾಶ್ವತ ಪೂಜೆ 1500.00
37
ತುಲಾಭಾರ 150.00
38
ಪ್ರಸಾದ ಕಾಣಿಕೆ 100.00
39
ಅಶ್ವಥ ಪೂಜೆ 100.00
40
ಕಟ್ಟೆ ಪೂಜೆ 250.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕೆನರಾ ಬ್ಯಾಂಕ್ 1553101003886 ಶ್ರೀ ರಾಮ ಕಾಂಪ್ಲೆಕ್ಸ್ ಜೆಪ್ಪು ಮಾರ್ಕೆಟ್ ಮೊರ್ಗನ್ಸ್ ಗೇಟ್ CNRB0001553

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ